ಮದ್ಯ ಮಾರಾಟದ ಮೇಲೆ ಆಯೋಗದ ಹದ್ದಿನ ಕಣ್ಣು

election commission eye on alcohol sales at state

09-04-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತಿಯನ್ನು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಚುನಾವಣಾ ಆಯೋಗ ಮದ್ಯ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಬಾರ್ ನವರು ಪ್ರತಿ ದಿನದ ಮದ್ಯಮಾರಾಟದ ಸಂಪೂರ್ಣ ವಿವರವನ್ನು ಅಬಕಾರಿ ಇಲಾಖೆ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ. ಅಷ್ಟೇ ಅಲ್ಲದೇ ಕಳೆದ ವರ್ಷ ಇದೇ ಅವಧಿಯಲ್ಲಿ ಎಷ್ಟು ಮದ್ಯ ಮಾರಾಟವಾಗಿತ್ತು ಎನ್ನುವ ಮಾಹಿತಿ ನೀಡಬೇಕು. ಕಳೆದ ವರ್ಷಕ್ಕೆ ತಾಳೆ ಹಾಕಿ ಶೇ 10ಕ್ಕಿಂತ ಮದ್ಯವ್ಯಾಪಾರ ಹೆಚ್ಚಾದರೇ ಅಂತಹ ಬಾರ್‍ಗಳಿಗೆ ನೋಟಿಸ್ ಕೊಟ್ಟು ಬೀಗ ಜಡಿಯುವ ಎಚ್ಚರಿಕೆ ನೀಡಿದೆ. ಈಗಾಗಲೇ ನಗರದ ಎಂಟು ಬಾರ್ ಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಇದರಿಂದ ಚುನಾವಣೆ ಸಮಯದಲ್ಲಿ ಭರ್ಜರಿ ಜೇಬು ತುಂಬಿಸಬಹುದು ಎನ್ನುವ  ನಿರೀಕ್ಷೆಯಿಟ್ಟುಕೊಂಡಿದ್ದ ಬಾರ್ ಮಾಲೀಕರ ಲೆಕ್ಕಚಾರ ತಲೆಕೆಳಗಾಗಿದೆ.


ಸಂಬಂಧಿತ ಟ್ಯಾಗ್ಗಳು

alcoholic Election Commission ಮಾಲೀಕ ಲೆಕ್ಕಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ