ಸಚಿವರ ವಿರುದ್ಧ ಡಿ.ಸಿ.ಮತ್ತೊಂದು ಅಸ್ತ್ರ!

A.manju v/s Rohini sindhuri

09-04-2018

ಹಾಸನ: ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ತಿರುಗಿಬಿದ್ದಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ, ನೀತಿ‌ ಸಂಹಿತೆ ಉಲ್ಲಂಘನೆ ಆರೋಪದಡಿ ಸಚಿವ ಎ.ಮಂಜುಗೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ. ಕಾರಣ‌ ಕೇಳಿ‌ ಅರಕಲಗೂಡು ಚುನಾವಣಾ ಅಧಿಕಾರಿಯಿಂದ ನೋಟಿಸ್ ನೀಡಿದ್ದು, ಎರಡು ದಿನಗಳಲ್ಲಿ ಉತ್ತರ‌ ನೀಡಲು ಸೂಚಿಸಿದ್ದಾರೆ. ನೀತಿ ಸಂಹಿತೆ ಜಾರಿ ಬಳಿಕ ಬಗರ್ ಹುಕುಂ‌ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ಹಾಕಿರುವ ಆರೋಪದ ಮೇಲೆ, ಅರಕಲಗೂಡು ತಹಶೀಲ್ದಾರ ಪ್ರಸನ್ನ ಮೂರ್ತಿ ಹಾಗು ಸಚಿವ ಎ.ಮಂಜುಗೆ ನೋಟಿಸ್ ನೀಡಲಾಗಿದೆ.

ಈ ಮಧ್ಯೆ ಎ.ಮಂಜು ವಿರುದ್ಧ ಮತ್ತೊಂದು ಎಫ್.ಐ.ಆರ್ ದಾಖಲಿಸಲು ನಡೆದಿದೆಯಾ ಸಿದ್ಧತೆ? ಎಂಬ ಅನುಮಾನಗಳೂ ಕಾಡುತ್ತಿವೆ. ಸಭೆ‌ ನಡೆಸದೆಯೇ 800ಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಮಾಡಿರುವ ಆರೋಪ, ಅದಲ್ಲದೇ ಅರ್ಜಿಗಳನ್ನು ತಿದ್ದಿ, ಅನರ್ಹರಿಗೆ ಸಾಗುವಳಿ ಚೀಟಿ‌ ನೀಡಿರೊ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rohini sindhuri A.Manju ಸಂಶಯ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ