‘ಟಿಕೆಟ್ ಪಡೆಯಲು ‘ರಾಯಣ್ಣ ಬ್ರಿಗೇಡ್’ ಸ್ಥಾಪಿಸಿಲ್ಲ’09-04-2018

ಶಿವಮೊಗ್ಗ: ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದ 'ಸಂಗೊಳ್ಳಿ ರಾಯಣ್ಣ' ಬ್ರಿಗೇಡ್ ಬೆಂಬಲಿಗರಿಗೆ ಬಿಜೆಪಿ ಟಿಕೆಟ್ ತಪ್ಪಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮಾಡಿದ್ದು, ಹಿಂದುಳಿದವರ ಸಂಘಟನೆ ಮಾಡಲು, ಅವರ ಅಭಿವೃದ್ಧಿಗಾಗಿ. ಬಿಜೆಪಿ ಟಿಕೆಟ್ ಪಡೆಯುವುದಕ್ಕೆ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಿದ್ದಲ್ಲ ಎಂದು ಹೇಳಿದ್ದಾರೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿ ಇಲ್ಲ. ಕಳೆದ ಬಾರಿಗಿಂತ ಪಕ್ಷ ಬಲಿಷ್ಠವಾಗಿದೆ, ಸಂಘಟಿತವಾಗಿದೆ. ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ