ಕಳ್ಳನೊಬ್ಬನ ದಾರುಣ ಸಾವು

building to building jump: thief died

09-04-2018

ದಾವಣಗೆರೆ: ಕಳ್ಳತನ ಮಾಡಲೆತ್ನಿಸಿ ಓಡಿ ಹೋಗುವಾಗ ಕಟ್ಟಡದ ಮೇಲಿಂದ ಬಿದ್ದು ಕಳ್ಳನೊಬ್ಬ ಸಾವನ್ನಪ್ಪಿದ್ದಾನೆ. ಜಿಲ್ಲೆಯ ನಿಟ್ಟುವಳ್ಳಿ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಬಡಾವಣೆಯ ನಿವಾಸಿ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಳ್ಳಲು, ಐದು ಜನ‌ ಕಳ್ಳರು ಬಂದಿದ್ದರು. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಿದ್ದರಿಂದ ಕಂಗಾಲಾದ ಕಳ್ಳರು, ಕಟ್ಟಡದಿಂದ ಕಟ್ಟಡಕ್ಕೆ ಹಾರಿ ನಾಲ್ವರು ತಪ್ಪಿಸಿಕೊಂಡಿದ್ದಾರೆ. ಕಟ್ಟಡ ಹಾರುವಾಗ ನಿಯಂತ್ರಣ ತಪ್ಪಿ‌ ಬಿದ್ದ ಕಳ್ಳನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Thief death ಚಿನ್ನದ ಸರ ಮಹಿಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ