ಕಲ್ಲಡ್ಕಗೆ ಖಾದರ್ ತಿರುಗೇಟು

kalladka prabhakar bhatt v/s u.t khadar

09-04-2018

ಮಂಗಳೂರು: ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಗೆ ಆಹಾರ ಸಚಿವ ಯು.ಟಿ ಖಾದರ್ ತಿರುಗೇಟು ನೀಡಿದ್ದಾರೆ. ಮತ್ತೊಮ್ಮೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿಯ ಕೊರಗಜ್ಜ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬೇಡಿಕೊಂಡಿರುವುದಾಗಿಯೂ, ಈ ವೇಳೆ ಖಾದರ್ಗೆ ಸ್ಥಳೀಯ ದಲಿತ ಮುಖಂಡರು ಪ್ರಸಾದ ನೀಡಿದರು.

ಕೆಲ ದಿನಗಳ ಹಿಂದೆ ಕೈರಂಗಳ ಎಂಬಲ್ಲಿ ಖಾದರ್ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದರು. ಗೋ ಮಾಂಸ ತಿನ್ನುವ ಖಾದರ್ ಗೆ ದೇವಸ್ಥಾನ ಪ್ರವೇಶ ನಿಷಿದ್ಧ ಎಂದಿದ್ದರು. ಈ ಕುರಿತು ಜಿಲ್ಲೆಯ ಎಲ್ಲಾ ದೇವಸ್ಥಾನಗಳ  ಆಡಳಿತ ಮಂಡಳಿಯೊಂದಿಗೆ ವಿನಂತಿಸಿ ಕೊಂಡಿದ್ದರು. ಆದರೆ ಈಗ ಮತ್ತೊಮ್ಮೆ ಖಾದರ್ ದೇವಸ್ಥಾನಕ್ಕೆ ಭೇಟಿ ನೀಡಿ ಈ ಮೂಲಕ ತಿರುಗೇಟು ನೀಡಿದ್ದಾರ. ಕಲ್ಲಡ್ಕ ಅವರ ಹೇಳಿಕೆ ವಿರುದ್ಧ ದಲಿತ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದರು.


ಸಂಬಂಧಿತ ಟ್ಯಾಗ್ಗಳು

U.T.Khader Prabhakar bhatt ಸ್ಥಳೀಯ ತಿರುಗೇಟು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ