ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿ

Karnataka assembly polls: BJP announces first list of candidates

09-04-2018

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 72 ಚುನಾವಣಾ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲಾಗಿದೆ. ನಿರೀಕ್ಷೆಯಂತೆ ಶಿಕಾರಿಪುರದಿಂದ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ಹುಕ್ಕೇರಿಯಿಂದ ಉಮೇಶ್ ಕತ್ತಿ, ಪದ್ಮ ನಾಭನಗರದಿಂದ ಆರ್.ಅಶೋಕ್ ಕಣಕ್ಕಿಳಿಯಲಿದ್ದಾರೆ.

ಅಚ್ಚರಿಯಂದರೆ ಶ್ರೀ ರಾಮುಲು ಅವರಿಗೆ ಬಳ್ಳಾರಿಯಿಂದ ಆಚೆಗೆ ಅಂದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ , ಹನೂರು ಕ್ಷೇತ್ರದ ಆಕಾಂಕ್ಷಿ ಯಾಗಿದ್ದ ವಿ.ಸೋಮಣ್ಣ ಅವರಿಗೆ ಗೋವಿಂದರಾಜ ನಗರ ಟಿಕೆಟ್ ನೀಡಲಾಗಿದೆ. ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮೊದಲ ಪಟ್ಟಿ ಬಿಡುಗಡೆ ಮಾಡಿದರು.

ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಮಾಲಿಕಯ್ಯ ಗುತ್ತೇದಾರ್-ಅಫಜಲ್ ಪುರ, ಎ.ಎಸ್.ಪಾಟೀಲ ನಡಹಳ್ಳಿ ಮುದ್ದೇಬಿಹಾಳ, ಬಸನಗೌಡ ಪಾಟೀಲ ಯತ್ನಾಳ್-ವಿಜಾಪುರ ನಗರ, ಮಲ್ಲಿಕಾರ್ಜುನ ಖೂಬ-ಬಸವಕಲ್ಯಾಣ, ಮಾನಪ್ಪ ವಜ್ಜಲ್-ಲಿಂಗಸಗೂರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election BJP list ದೆಹಲಿ ಬಿಡುಗಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ