ಇಸ್ರೇಲ್ ಯೂರೋಪ್ ನಲ್ಲಿ - ಪುನೀತ್ ಉವಾಚ!

Israel in Europe - Puneet Uwacha!

08-04-2018 13526

ಕ್ರೈಸ್ತರ ಪವಿತ್ರ ಸ್ಥಳ ಜೆರುಸಲೆಮ್ ಇರುವುದು ಯೂರೋಪ್ ನಲ್ಲಿ! ಇದನ್ನ ಹೇಳಿದ್ದು ಬೇರೆ ಯಾರೂ ಅಲ್ಲ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಫ್ಯಾಮಿಲಿ ಪವರ್ ರಿಯಾಲಿಟಿ ಷೋನಲ್ಲಿ ಓರ್ವ ಸ್ಪರ್ಧಿಯೊಂದಿಗೆ ಮಾತನಾಡುತ್ತಾ ನೀವು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿರುವುದರಿಂದ ನಾನು ನಿಮಗೆ ಅದಕ್ಕೆ ಸಂಬಂಧ ಪಟ್ಟ ಪ್ರಶ್ನೆಯನ್ನು ಕೇಳುತ್ತೇನೆ ಎಂದು ಹೇಳಿ 'ಕ್ರೈಸ್ತರ ಪವಿತ್ರ ಸ್ಥಳ ಜೆರುಸಲೆಮ್ ಯಾವ ದೇಶದಲ್ಲಿದೆ ಎಂದು ಕೇಳಿದರು. ಅದಕ್ಕೆ ಆ ಸ್ಪರ್ಧಿ ಅದು ಯೂರೋಪ್ ನಲ್ಲಿದೆ ಎಂದು ಹೇಳಿದರು. ಅದಕ್ಕೆ ಅಪ್ಪು ಹೌದು ಯೂರೋಪ್ನಲ್ಲೇ ಇದೆ ಆದರೆ ಯೂರೋಪ್ ಒಂದು ದೊಡ್ಡ ಜಾಗ, ಅಲ್ಲಿ ಯಾವ ದೇಶದಲ್ಲಿದೆ ಎಂದು ಕೇಳಿದರು. ಅದಕ್ಕೆ ಆ ಸ್ಪರ್ಧಿ ಉತ್ತರಿಸದಾದಾಗ ' ಸರಿ ಉತ್ತರ ಇಸ್ರೇಲ್' ಎಂದು ಹೇಳಿದರು. ಯೂರೋಪಿನಲ್ಲಿ ಜೆರುಸಲೆಮ್ ಎಂಬ ಹೆಸರಿನ ಅನೇಕ ಸಣ್ಣ ಪುಟ್ಟ ಊರುಗಳಿವೆ, ಆದರೆ ಕ್ರೈಸ್ತರ ಪವಿತ್ರ ಸ್ಥಳ ವಾಗಿರುವ ಜೆರುಸಲೆಮ್ ಇರುವುದು ಇಸ್ರೇಲ್ ದೇಶದಲ್ಲಿ ಮತ್ತು ಇಸ್ರೇಲ್ ಇರುವುದು ಪಶ್ಚಿಮ ಏಷ್ಯಾದಲ್ಲಿ. ಪುನೀತ್ ಗೊತ್ತಿಲ್ಲದ ವಿಷಯದ ಬಗ್ಗೆ ಜಾಗ್ರತೆ ವಹಿಸಬೇಕಾಗಿತ್ತು. ಕಾರ್ಯಕ್ರಮ ನಡೆಸುವಾಗ ಕಿವಿಯಲ್ಲಿ ಮತ್ತು ಕಂಪ್ಯೂಟರ್ನಲ್ಲಿ ಸತತವಾಗಿ ಮಾಹಿತಿ ನೀಡುತ್ತಿದ್ದರೂ ತಮ್ಮ ಸಾಮಾನ್ಯ ಜ್ಞಾನದ ಕೊರತೆಯನ್ನು ಪುನೀತ್ ಯಾಕೆ ಪ್ರದರ್ಶಿದರು ಎಂದು ಗೊತ್ತಿಲ್ಲ. ಸಿನೆಮಾಗಳಲ್ಲಿ ಕುಣಿಯುವ ಮತ್ತು ನಟಿಸುವ ನಾಯಕರು ಸ್ವಲ್ಪ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಂಡರೆ ಒಳ್ಳೆಯದು ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Kerra haritave mindri magne nuchkond post delete madale Bevarsi,,,
  • Satish naik
  • Job
ಥೂ ನಿನ್ನಂತಾ ದಡ್ಡರೇ ಈ ಸಿನ್ಮಾ ಹೀರೋಗಳ ಅಭಿಮಾನಿಗಳಾಗಿರೋದು ಕನ್ನಡಿಗರ ದೌರ್ಭಾಗ್ಯ.
  • raghu
  • Raj