ಹೆಚ್ಡಿಕೆ ವಿವಾದಾತ್ಮಕ ಹೇಳಿಕೆ

controversial statement of kumaraswamy at vikasa parva yatra

07-04-2018

ಹುಬ್ಬಳ್ಳಿ: ಜಿಲ್ಲೆಯ ಕುಂದಗೋಳದಲ್ಲಿ ನಡೆದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರ ಸ್ವಾಮಿ ಅವರು, ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ,  ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇನೆ. ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ರೈತರ 52 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೆನೆ ಎಂದು ಹೇಳಿಕೆ ನೀಡಿದ್ದಾರೆ.

ರೈತರ ಸಾಲ ಮನ್ನಾ ಮಾಡಿದ ನಂತರ ಮತ್ತೆ ರೈತರು ಸಾಲ ಮಾಡಬಾರದು ಅದಕ್ಕಾಗಿ ಕೃಷಿ ನೀತಿಗಳನ್ನ ಬದಲಾವಣೆ ಮಾಡುತ್ತೇನೆ. ಇಸ್ರೇಲ್ನ 200ಕ್ಕೂ ವಿಜ್ಞಾನಿಗಳನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತೆನೆ. ವಿಜ್ಞಾನಿಗಳನ್ನ ಕರೆಯಿಸಿ ರೈತರಿಗೆ ಕೃಷಿ ಬಗ್ಗೆ ತಿಳುವಳಿಕೆ ನೀಡುವ ಕೆಲಸ ‌ಮಾಡುತ್ತೆನೆ ಎಂದಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕುರುಬ ಸಮಾಜದ ಜನರು ಹಣ ಸೇರಿಸಿ ಮುಖ್ಯಮಂತ್ರಿ ಮಾಡಲು ಸಹಾಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಆ ಸಮಾಜಕ್ಕೆ ನಯಾಪೈಸೆ ಕೊಡುಗೆ ನೀಡಿಲ್ಲ ಎಂದು ದೂರಿದ್ದಾರೆ.

ಕುರುಬ ಸಮಾಜದ ಡಿವೈಸ್‌ಪಿ ಕಲ್ಲಪ್ಪ ಹಂಡಿಬಾಗ ಪ್ರಮಾಣಿಕ ಕೆಲಸ ಮಾಡಿದ್ದೆ ತಪ್ಪಾಯಿತು. ಪ್ರಮಾಣಿಕ ಕೆಲಸ ಮಾಡಿದ್ದಕ್ಕೆ ಈ ಸರ್ಕಾರ ಆತನಿಗೆ ಕೊಟ್ಟಿದ್ದು " ನೇಣು ಭಾಗ್ಯ", ನಾನು ಒಂದು ವೇಳೆ ಆ ಕುಟುಂಬದ ಪರವಾಗಿ ಸರ್ಕಾರದ ಗಮನ ಸೆಳೆಯದಿದ್ದರೆ ಆತನ ಹೆಂಡತಿ ಮೈಮಾರಿಕೊಂಡು ಜೀವನ ನಡೆಸಬೇಕಾಗುತ್ತಿತ್ತು, ಎಂದು ಕಲ್ಲಪ್ಪ ಹಂಡಿಬಾಗ ಕುಟುಂಬದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Kallappa Handibag DYSP ಅಧಿಕಾರ ಇಸ್ರೇಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ