ಬ್ಯಾಂಕ್ ನೌಕರನ ಮನೆಯಲ್ಲಿ ದಾಖಲೆ ಇಲ್ಲದ ಹಣ ಪತ್ತೆ

07-04-2018
ತುಮಕೂರು: ಮಧುಗಿರಿಯ ವಿ.ಎಸ್.ಎಸ್.ಎನ್ ಬ್ಯಾಂಕ್ ನ ಸಹಾಯಕ ಅಧಿಕಾರಿಯ ಆಪ್ತಸಹಾಯಕನ ಮನೆಯಲ್ಲಿ, ದಾಖಲೆ ಇಲ್ಲದ 5 ಲಕ್ಷ 40 ಸಾವಿರ ಹಣ ಪತ್ತೆಯಾಗಿದೆ. ಅಗಾಧ ಪ್ರಮಾಣದ ಮದ್ಯ ಇರುವ ಶಂಕೆ ಮೇರೆಗೆ ತಾಲ್ಲೂಕಿನ ಜೀವಗೊಂಡನಹಳ್ಳಿಯಲ್ಲಿನ ನಾಗರಾಜು ಎಂಬುವರ ಮನೆ ಮೇಲೆ, ಅಬಕಾರಿ ನಿರೀಕ್ಷಕಿ ಶ್ರೀಲತಾ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಮೆಂಟನ್ನು ಹಾಕಿ