ಕೆಂಪಯ್ಯ ಅಧಿಕಾರ ಮೊಟಕು?

hd devegowda v/s Kempaiah

06-04-2018

ಬೆಂಗಳೂರು: ಕೆಂಪಯ್ಯ ಅವರನ್ನು ಬಳಸಿಕೊಂಡು ಹಣ ಸಾಗಣೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನೀಡಿರುವ ದೂರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್, ಅಸಂವಿಧಾನಿಕ ವ್ಯಕ್ತಿಗಳನ್ನು ಆಯೋಗ ದೂರ ಇಡಲಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ವಾಹನಗಳಲ್ಲಿ ಹಣ ಸಾಗಾಣೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹಣ ವರ್ಗಾವಣೆ ಮತ್ತು ಸಾಗಣೆ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಆದಾಯ ತೆರಿಗೆ ಇಲಾಖೆಯೂ ನೆರವು ನೀಡುತ್ತಿದೆ. ಇದರ ಮೇಲೆ ತಿವ್ರ ನಿಗಾ ಇಡುವ ಸಲುವಾಗಿ ಸ್ಪೆಷಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಓ.ಪಿ.ರಾವತ್ ವಿವರಿಸಿದರು.

ಒಂದು ಕ್ಷೇತ್ರ ಒಂದು ಅಭ್ಯರ್ಥಿ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಪಿಐಎಲ್ ದಾಖಲಿಸಿದ್ದೇವೆ, ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೆ ನೋಡೋಣ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದರು. 


ಸಂಬಂಧಿತ ಟ್ಯಾಗ್ಗಳು

Kempaiah home affairs ಸ್ಪೆಷಲ್ ಸುಪ್ರೀಂ ಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ