‘ಸರಾಸರಿ 44ದಿನಗಳು ಮಾತ್ರ ಕಲಾಪ ನಡೆದಿದೆ’06-04-2018

ಬೆಂಗಳೂರು: ವರ್ಷದಲ್ಲಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂಬ ಉದ್ದೇಶ ವಿಫಲವಾಗಿದ್ದು, ಪ್ರಸಕ್ತ 14ನೇ ವಿಧಾನಸಭೆ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 44 ದಿನಗಳ ಕಾಲ ಕಲಾಪ ನಡೆದಿದೆ. ಕಳೆದ 2013ರ ಮೇ 28 ರಿಂದ ಈವರೆಗೆ ಒಟ್ಟು 216 ದಿನಗಳ ಕಾಲ ಅಧಿವೇಶನ ನಡೆದಿದೆ. 2015ರಲ್ಲಿ ಅತಿ ಹೆಚ್ಚು ಅಂದರೆ 58 ದಿನಗಳ ಕಾಲ ಕಲಾಪ ನಡೆದಿತ್ತು ಎಂದು ಎಲೆಕ್ಷನ್ ವಾಚ್ ಸಂಸ್ಥೆಯ ವರದಿ ತಿಳಿಸಿದೆ.

ಆದರೆ ಯಾವುದೇ ಶಾಸಕರು ಕಲಾಪದಲ್ಲಿ ಶೇ100 ರಷ್ಟು ಹಾಜರಾಗಿಲ್ಲ. ಆದರೆ ಕಾಂಗ್ರೆಸ್ ಶಾಸಕರಾದ ಡಾ.ರಫಿಕ್ ಅಹಮದ್, ಕೆ.ಬಿ.ಪ್ರಸನ್ನ ಕುಮಾರ್ ಹಾಗೂ ಬಿ.ಎಂ. ನಾಗರಾಜು ಅವರು ಶೇ95 ರಷ್ಟು ಹಾಜರಾತಿ ಹೊಂದಿದ್ದಾರೆ.

ಒಟ್ಟು 208ಶಾಸಕರು 37,110 ಪ್ರಶ್ನೆಗಳನ್ನು ಕೇಳಿದ್ದು, ಪ್ರತಿಯೊಬ್ಬ ಶಾಸಕರು ಸರಾಸರಿ 178 ಪ್ರಶ್ನೆಗಳನ್ನು ಕೇಳಿದ್ದಾರೆ. ಜೆಡಿಎಸ್‍ನ ಗೋಪಾಲಯ್ಯ ಅತಿ ಹೆಚ್ಚು 885 ಪ್ರಶ್ನೆಗಳನ್ನು ಕೇಳಿದ್ದು, ನಂತರ ಜೆಡಿಎಸ್‍ಗೆ ರಾಜೀನಾಮೆ ನೀಡಿರುವ ಮಲ್ಲಿಕಾರ್ಜುನ ಸಿದ್ದರಾಮಪ್ಪ ಖೂಬ 795 ಹಾಗೂ ಕಾಂಗ್ರೆಸ್‍ನ ಎನ್.ಎ.ಹ್ಯಾರಿಸ್ 750 ಪ್ರಶ್ನೆಗಳನ್ನು ಕೇಳಿದ್ದಾರೆ. ಒಟ್ಟಾರೆ ಈ ಅವಧಿಯಲ್ಲಿ 216 ಮಸೂದೆಗಳನ್ನು ಮಂಡಿಸಲಾಗಿದ್ದು, 209 ಮಸೂದೆಗಳಿಗೆ ಅಂಗೀಕಾರ ದೊರೆತಿದೆ ಎಂದು ಎಲೆಕ್ಷನ್ ವಾಚ್ ಸಂಸ್ಥೆ ವರದಿ ತಿಳಿಸಿದೆ.


ಸಂಬಂಧಿತ ಟ್ಯಾಗ್ಗಳು

vidhana sabha session ಮಸೂದೆ ಅಂಗೀಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ