ಲವ್ ಅಂಡ್ ಮರ್ಡರ್ ಸ್ಟೋರಿ

Love and Murder Story

06-04-2018

ಬೆಂಗಳೂರು: ಪ್ರೀತಿಸಿ ಸಂಬಂಧ ಬೆಳೆಸಿದ ಯುವತಿ ವಿವಾಹವಾಗಲು ಒತ್ತಾಯಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಆಕೆಯನ್ನು ನಂಬಿಸಿ ಅರಣ್ಯಕ್ಕೆ ಕರೆದೊಯ್ದು ಕೊಲೆ ಮಾಡಿ ಮೃತದೇಹವೇ ಸಿಗದಂತೆ ಮಾಡಿ ಚಿಕ್ಕಬಳ್ಳಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮಾತು ಬಾರದ, ಕಿವಿ ಕೇಳದ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದ್ದು ಆರೋಪಿ ಗೌರಿಬಿದನೂರಿನ ಮುನೇಶ್ವರ ಬಡಾವಣೆಯ ಕಿಶೋರ್‍ ನನ್ನು ಬಂಧಿಸಲಾಗಿದೆ.

ಗೌರಿಬಿದನೂರಿನ ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿದ್ದ ಕಿಶೋರ್ ತನ್ನ ಪ್ರಿಯತಮೆ ಕೋಡಿಗಾನಹಳ್ಳಿ ಗ್ರಾಮದ ಅನಿತಾ (22)ಳನ್ನು ಕೊಲೆ ಮಾಡಿದ್ದಾನೆ. ಗಾರ್ಮೆಂಟ್ಸ್ ನಲ್ಲೇ ಕೆಲಸ ಮಾಡುತ್ತಿದ್ದ ಅನಿತಾಳ ಜೊತೆ ಲವ್ವಿ ಡವ್ವಿ ಶುರು ಇಟ್ಟುಕೊಂಡಿದ್ದ ಕಿಶೋರ್ ದೈಹಿಕವಾಗಿ ಆಕೆಯನ್ನೇ ಬಳಸಿಕೊಂಡಿದ್ದಾನೆ. ಕೊನೆಗೆ ಆಕೆ ಮದುವೆಯಾಗು ಎನ್ನುತ್ತಿದ್ದಂತೆ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಎಂದು ಕ್ಯಾತೆ ತೆಗೆದಿದ್ದಾನೆ.

ಇದೆಲ್ಲದರ ನಡುವೆ ಆನಿತಾ ಹಣಕ್ಕಾಗಿ ಕಿಶೋರ್ ಬಳಿ ಪೀಡಿಸುತ್ತಿದ್ದಳಂತೆ. ಇದರಿಂದ ರೋಸಿ ಹೋದ ಕಿಶೋರ್ ಹಣ ಕೊಡುವುದಾಗಿ ನಂಬಿಸಿ ಕಳೆದ ಮಾರ್ಚ್ 4ರಂದು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಗೌರಿಬಿದನೂರು ತಾಲೂಕಿನ ನಿರ್ಜನ ಪ್ರದೇಶದವಾದ ದೊಡ್ಡಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ಗುಂಡಿಗೆ ತಳ್ಳಿ, ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊನೆಗೆ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿಬಂದಿದ್ದ. ಈ ಸಂಬಂಧ ಕೆಲಸಕ್ಕೆ ಹೋದ ಮಗಳು ಬಂದಿಲ್ಲ ಎಂದು ಅನಿತಾಳ ಸಂಬಂಧಿಕರು ಮಾರ್ಚ್ 10 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಲೆಬರುಡೆ ಪತ್ತೆ: ಇದೆಲ್ಲದರ ನಡುವೆ ಮಾರ್ಚ್ 30ರಂದು ದೊಡ್ಡಹನುಮೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆ ಬುರುಡೆ, ಮೂಳೆಗಳು ಹಾಗೂ ಅದರ ಜೊತೆಗೆ ಅಲ್ಲೆ ಸಿಕ್ಕ ಬ್ಯಾಗ್ ನಿಂದ ಅನಿತಾ ಕೊಲೆಯಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅನಿತಾಳ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರು. ಅನಿತಾಳ ಮೊಬೈಲ್ ನಲ್ಲಿದ್ದ ಫೋಟೋಗಳು ಹಾಗೂ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿ, ಕಿಶೋರ್ ನನ್ನ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಆರೋಪಿ ಕಿಶೋರ್ ನನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder lover ವಿಚಾರಣೆ ಫೋಟೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ