‘ಚುನಾವಣಾ ಪೂರ್ವಸಿದ್ಧತೆ ತೃಪ್ತಿಕರ’-ರಾವತ್

karnataka election: chief electoral officer press meet

06-04-2018

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ  ಓಂ ಪ್ರಕಾಶ್ ರಾವತ್ ಅವರು, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರಾಜಕೀಯ ಪಕ್ಷಗಳ ಮುಖಂಡರು, ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ, ಮಾಜಿ ಪ್ರಧಾನಿ ದೇವೇಗೌಡರು ಸಹ ಭೇಟಿ ಮಾಡಿ ಸಲಹೆ ಕೊಟ್ಟಿದ್ದಾರೆ, ಈ ವೇಳೆ ರಾಜಕೀಯ ಪಕ್ಷದ ನಾಯಕರು ಒಂದಷ್ಟು ಸಮಸ್ಯೆಗಳನ್ನ ಹೇಳಿಕೊಂಡಿದ್ದಾರೆ, ಏಕಗವಾಕ್ಷಿಯಲ್ಲಿ ರ‍್ಯಾಲಿಗಳಿಗೆ ಪರ್ಮಿಷನ್ ಕೊಡೋದಕ್ಕೆ ಕೇಳಿದ್ದಾರೆ, ನೀತಿ ಸಂಹಿತೆಯಿಂದ ಅಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ನಾವು ರಾಜಕೀಯ ಪಕ್ಷದ ನಾಯಕರು ಹೊಂದಿರುವಂತಹ ಟಿವಿ ಚಾನಲ್ಗಳು ಹಾಗೂ ಪತ್ರಿಕೆಗಳ ಮೇಲೆ ನಿಗಾ ವಹಿಸಿದ್ದೇವೆ. ಸ್ವಂತ ಪ್ರಚಾರಕ್ಕೆ ಅವುಗಳ ಬಳಕೆ ಆಗುತ್ತಿದೆಯೇ ಅನ್ನೋದರ ಬಗ್ಗೆ ಗಮನ ಹರಿಸುತ್ತಿದ್ದೇವೆ, ಪೇಯ್ಡ್ ನ್ಯೂಸ್ ಬಗ್ಗೆ ಗಮನ ಇರಿಸಲು ಪ್ರತ್ಯೇಕ ತಂಡ ರಚಿಸಿದ್ದು, ನಾಮಪತ್ರ ಸಲ್ಲಿಕೆ ನಂತರ ಪೇಯ್ಡ್ ನ್ಯೂಸ್ ಬಗ್ಗೆ ತೀವ್ರ ನಿಗಾ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೇವಾ ಮತದಾರರಿಗೆ ಎಲೆಕ್ಟ್ರಾನಿಕಲಿ ಟ್ರಾನ್ಸಮಿಟೆಡ್ ಓಟಿಂಗ್ ಸಿಸ್ಟಂ ಬಳಕೆ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ. ಇವಿಎಂ ಮತ್ತು ವಿ.ವಿ.ಪ್ಯಾಟ್ ಬಗ್ಗೆ ಅರಿವು ಕಾರ್ಯಕ್ರಮ ಜಾರಿಯಲ್ಲಿದೆ. ಚುನಾವಣಾ ಭದ್ರತಾ ಕಾರ್ಯಕ್ಕೆ 150 ಸಿ.ಆರ್.ಪಿ.ಎಫ್ ಪಡೆ ಕರ್ನಾಟಕಕ್ಕೆ ಬಂದಿಳಿದಿದೆ, ಅಗತ್ಯವಾದಲ್ಲಿ ಹೆಚ್ಚುವರಿ ಪಡೆಗಳನ್ನು ಕರೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದುವರಗೆ 2ಕೋಟಿ ರೂ. ನಗದು, 2.46kg ಚಿನ್ನ,3.7 ಕೋಟಿ ಮೌಲ್ಯದ ವಸ್ತುಗಳನ್ನು ಆಯೋಗ ವಶ ಪಡಿಸಿಕೊಂಡಿದೆ. ಅಕ್ರಮ ಮದ್ಯ ಸಾಗಣೆ ಪತ್ತೆಗೆ ಅಬಕಾರಿ ಇಲಾಖೆಯ 200 ತಂಡಗಳನ್ನು ರಚಿಸಲಾಗಿದೆ. ಪೂರ್ವಸಿದ್ಧತೆ ಪರಿಶೀಲನೆ ಪೂರ್ಣ ಮತ್ತು ತೃಪ್ತಿಕರವಾಗಿದೆ ಎಂದರು.

ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದೇವೆ, ಬಹುತೇಕ ರಾಜಕೀಯ ಪಕ್ಷಗಳ ಪ್ರಮುಖರು ಚುನಾವಣಾ ನೀತಿ ಸಂಹಿತೆ ಜಾರಿ ಅದರಲ್ಲೂ ಅಧಿಕಾರಿಗಳ ವರ್ಗಾವಣೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷಗಳ ಜತೆ ಸಂಪರ್ಕ ಹೊಂದಿರುವ ಅಧಿಕಾರಿಗಳ ಬಗ್ಗೆ ದೂರು ಬಂದಿವೆ. ಅಂತಹ ಅಧಿಕಾರಿಗಳ ವಿರುದ್ಧ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.‌ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಿಂದ ವಿನಾಯ್ತಿ ಕೇಳಿದ್ದಾರೆ‌, ಇದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.

ಮತದಾನ ದಿನ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ, ಏರ್ ಆಂಬುಲೆನ್ಸ್ ವ್ಯವಸ್ಥೆ ಬಳಸಲು ನಿರ್ಧರಿಸಲಾಗಿದ್ದು, ರೌಡಿಗಳು ಚುನಾವಣೆ ಮೇಲೆ ಪರಿಣಾಮ ಬೀರದಂತೆ ಕ್ರಮ, ಹಣ ವರ್ಗಾವಣೆ ಮೇಲೆ ನಿಗಾ ವಹಿಸಲು ಐಟಿ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಎಲ್ಲ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ವಾಡ್ ನಿಯೋಜನೆ ಮಾಡಲಾಗಿದೆ ಎಂದರು. .

ಕೆಂಪಯ್ಯ ವಿರುದ್ದ ದೇವೇಗೌಡರು ನೀಡಿರುವ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತನಿಖೆಗೂ ಆದೇಶಿಸಿದೆ. ಬಿಜೆಪಿಯ ಮುಷ್ಠಿಧಾನ್ಯ ಅಭಿಯಾನ ಸಾಮೂಹಿಕ ಭೋಜನ ವಿಚಾರದ ಬಗ್ಗೆ ಈ ವರೆಗೂ ದೂರು ಬಂದಿಲ್ಲ. ಆದರೂ ಇದು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದನ್ನು ಆಯೋಗ ಪರಿಶೀಲಿಸುತ್ತದೆ. ನೀತಿ ಸಂಹಿತೆ ವಿರೋಧಿ ಎಂದು ಕಂಡು ಬಂದರೆ ತಕ್ಷಣ ಸ್ಥಗಿತಗೊಳಿಸಲು ಸೂಚನೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Om Prakash Rawat Election Commission ಆಕ್ಷೇಪ ಅಬಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ