ತನಗೂ ತಡವಾಗಿ ಜ್ಞಾನೋದಯವಾಗಿದೆ ಎಂದ ರೈ

Prakash Rai

06-04-2018

ಚಿತ್ರದುರ್ಗ: ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಉದ್ದೇಶ ಇಲ್ಲ ಎಂದು, ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ರೈ, ಈ ವಿಚಾರವನ್ನು ತಿಳಿಸಿದ್ದಾರೆ. ಜನ ಪ್ರಶ್ನೆ ಮಾಡಬೇಕು ಎಂಬ ಉದ್ದೇಶಕ್ಕಾಗಿ Just Asking ಚಳವಳಿ ಆರಂಭಿಸಿದ್ದೇನೆ. ನಾನು ಈಗ ಹೇಳುತ್ತಿರುವ ಸಮಸ್ಯೆಗಳು ಈ ಹಿಂದೆಯೂ ಇದ್ದವು. ನಾನು ಈಗ ಮಾತನಾಡುತ್ತಿದ್ದೇನೆ, ನನಗೂ ತಡವಾಗಿ ಜ್ಞಾನೋದಯವಾಗಿದೆ. ನನ್ನ ಸಾಮಾಜಿಕ ಹೋರಾಟಕ್ಕೆ ಸ್ಪೂರ್ತಿ ಬಿಜೆಪಿಯವರು ಎಂದು ಸೂಕ್ಷ್ಮವಾಗಿ ನುಡಿದಿದ್ದಾರೆ.

ಶಿಕ್ಷಣ, ‌ಆರೋಗ್ಯ ರಾಷ್ಟ್ರೀಕರಣ ಆಗುವ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಸೆಂಟ್ರಲ್ ಪಾಲಿಟಿಕ್ಸ್ ಬೇಕಾಗಿಲ್ಲ. ಕೇಂದ್ರದವರು ಡಿಫೆನ್ಸ್ ನೋಡಿಕೊಳ್ಳಲಿ. ಆದರೆ, ನಮ್ಮ ರೈತರ, ನಮ್ಮ ಜನರ ಕಷ್ಟ ಅವರಿಗೆ ಹೇಗೆ ಅರ್ಥವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕಾವೇರಿ ನಿಯಂತ್ರಣ ಮಂಡಳಿ ರಚನೆ ಮಾಡಿದರೆ ನಮಗೆ ಸಮಸ್ಯೆ ಆಗುತ್ತದೆ. ತಮಿಳುನಾಡು ಈಗ ಬಂದ್ ಮಾಡಿ ಪ್ರತಿಭಟಿಸಿದೆ. ಎರಡೂ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಗಳಿಂದ ಏನು ಆಗಲ್ಲ, ಒಟ್ಟಿಗೆ ಕುಳಿತು ಇತ್ಯರ್ಥ ಮಾಡಿಕೊಳ್ಳಬೇಕು. ನೀರಿನ ಬಳಕೆ ಕಡಿಮೆ ಮಾಡುವುದು, ಕಡಿಮೆ ನೀರಿನ ಬೆಳೆ ಬೆಳೆಯಬೇಕು ಎನ್ನುವ ಬಗ್ಗೆ ಆಲೋಚನೆ ಮಾಡಬೇಕು ಎಂದರು. ಪ್ರಧಾನಿ ಏನು ಮಾಡುತ್ತಿದ್ದಾರೆ, ಉದ್ಯೋಗ ಕೊಟ್ಟಿಲ್ಲ. ಕಪ್ಪು ಹಣ ತಂದಿಲ್ಲ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

ಜ್ಞಾನೋದಯ ಡಿಫೆನ್ಸ್ politics prakash rai


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ