'ಪರಿಸ್ಥಿತಿ ಬದಲಾಗಿರಬಹುದು ಆದರೆ ಗೆಲುವು ನನ್ನದೇ'06-04-2018

ಮೈಸೂರು: ನನಗೂ ಚುನಾವಣೆಯಲ್ಲಿ ಸೋಲಿಸುವುದು ಗೊತ್ತಿದೆ‌, ನಾನೂ ಕೂಡ ಅವರಿಬ್ಬರನ್ನ ಸೋಲಿಸುತ್ತೇನೆ ಎಂದು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರಿಗೆ ಸಿಎಂ ಸಿದ್ದರಾಮಯ್ಯ ನೇರವಾಗಿ ತಿರುಗೇಟು ನೀಡಿದ್ದಾರೆ.

ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅವರನ್ನು ಸೋಲಿಸಲು ವಾರಗಳು ಬೇಡ, ಕೇವಲ ಒಂದೇ ದಿನ ಪ್ರಚಾರಕ್ಕೆ ಹೊದರೆ ಸಾಕು ಎಂದು ಟಾಂಗ್ ನೀಡಿದ್ದಾರೆ. ಉಪಚುನಾವಣೆಯಲ್ಲೂ ಇಂತಹದ್ದೇ ಹೇಳಿಕೆ‌ ನೀಡಿದ್ದರು, ಎಲ್ಲರೂ ಒಂದಾಗಿ ಪ್ರಯತ್ನ ಮಾಡಿದರು, ದೇವೆಡಗೌಡರು ಬಂದು ಕಣ್ಣಿರು ಹಾಕಿದರು, ಆದರು ನನ್ನನ್ನು ಯಾರು ಏನು ಮಾಡಲು ಆಗಲೇ ಇಲ್ಲ. ರಾಜಕೀಯ ಪರಿಸ್ಥಿತಿ ಬದಲಾಗಿರಬಹುದು ಆದರೆ ಗೆಲುವು ನನ್ನದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್.ವಿಶ್ವನಾಥ್ ಮತ್ತು ಶ್ರೀನಿವಾಸ್ ಪ್ರಸಾದ್ ನಮ್ಮ‌ ಕ್ಷೇತ್ರದವರೆಲ್ಲ, ನಾನು ಯಾರಿಗೂ ಹೆದರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದಲ್ಲೇ ನನ್ನ ಸ್ಪರ್ಧೆ. ನಾನು ಚಾಮುಂಡೇಶ್ವರಿ ಬಿಟ್ಟು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಎಷ್ಟು ಬಾರಿ ನಾನು ಅದನ್ನು ಪುನರಾವರ್ತಿಸಲಿ. ನಾನು ಚಾಮುಂಡೇಶ್ವರಿಯಲ್ಲೇ ನಿಲ್ಲುತ್ತೇನೆ ಎಂದು, ಇದೇ ವೇಳೆ ಮೂರು ಬಾರಿ ಉಚ್ಛರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ