ಸಿಎಂಗೆ ಹೆಚ್ಡಿಕೆ ತಿರುಗೇಟು06-04-2018

ಹುಬ್ಬಳ್ಳಿ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರುಗಳು ರಾಜ್ಯ ಸುತ್ತುತ್ತಿದ್ದಾರೆ, ಆದರೆ ಜನರ ಸಮಸ್ಯೆಗಳ‌ ಬಗ್ಗೆ ಮಾತು ಕಡಿಮೆ, ಕೇವಲ ಪರಸ್ಪರ ಟೀಕೆಗೆ ಮಾತ್ರ ಪ್ರವಾಸ ಸೀಮಿತವಾಗಿದೆ ಎಂದು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯಾದ್ಯಂತ ತಾವು ಪ್ರವಾಸ ಕೈಕೊಂಡಿದ್ದು, ಜನರಲ್ಲಿ ಜೆಡಿಎಸ್ ಪರ ಒಲವು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷ ಜನರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚೆರ್ಚೆ ಮಾಡುತ್ತಿದೆ, ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಶಕ್ತಿ ಜನತೆ ನನಗೆ ನೀಡುತ್ತಿದ್ದಾರೆ. ಜೆಡಿಎಸ್ 25ಸ್ಥಾನ ಗೆಲ್ಲುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಎಚ್.ಡಿ.ಕೆ ವಾಗ್ದಾಳಿ ನಡೆಸಿದ್ದಾರೆ. ನಾನು ನಾನು ಯಾವುದೇ ಭ್ರಮಾಲೋಕದಲ್ಲಿಲ್ಲ, ಜನತೆಯ ಭ್ರಮಾ ಲೋಕದಲ್ಲಿದ್ದೇನೆ ಎಂದು ತಿರುಗೇಟು ನೀಡಿದರು. ಸ್ಪಷ್ಟ ಬಹುಮತದೊಂದಿಗೆ ನಾವು ಅಧಿಕಾರಕ್ಕೆ‌ ಬರುತ್ತೆವೆ, ಟೀಕೆ ಟಿಪ್ಪಣಿಗಳಿಂದ ಜನತೆ ಸಮಸ್ಯೆ ಪರಿಹಾರ ಕಾಣುವುದಿಲ್ಲ ಎಂದರು.

ಇನ್ನು ಎರಡು ಕಡೆ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು, ಅವರು ನನಗೆ ಸಲಹೆ ಕೊಡುವುದು ಬಿಟ್ಟು, ಅವರ ಇತಿಹಾಸ ನೋಡಿಕೊಳ್ಳಲಿ, ಬೇನಾಮಿ ಆಸ್ತಿ ಬಗ್ಗೆ ಕೇಂದ್ರ ಸರ್ಕಾರದ ಮೂಲಕ‌ ತನಿಖೆ ನಡೆಸಲಿ‌. ಕೇಂದ್ರದಲ್ಲಿ ಬಿಜೆಪಿ ಅಧಿಕಾರಲ್ಲಿದೆ, ತನಿಖೆ ಮಾಡಿಸಲಿ‌ ಯಾವುದೇ ವಿದೇಶಿ ಆಸ್ತಿ‌ ಇದ್ದರೆ, ಅದನ್ನು ವಶಕ್ಕೆ ತೆಗೆದುಕೊಂಡು, ರೈತರಿಗೆ ಹಂಚಲಿ. ಯಡಿಯೂರಪ್ಪ ನನ್ನ ಅಕ್ರಮ ಆಸ್ತಿ ಹುಡಕಿದರು, ಸಿದ್ದರಾಮಯ್ಯ ಸಹ ನನ್ನ ಅಕ್ರಮ ಆಸ್ತಿಯನ್ನು ಹುಡುಕುವ ಪ್ರಯತ್ನ ಮಾಡಿದರು, ಅವರಿಬ್ಬರಿಗೂ ಕಾಣದ ಅಕ್ರಮ ಆಸ್ತಿ‌ ಸಿ.ಪಿ.ಯೋಗೇಶ್ವರ್ಗೆ ಕಂಡಿದೆ ಎಂದು ವ್ಯಂಗ್ಯವಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎನ್ನುವುದುಕ್ಕಿಂದ ನಮ್ಮ‌ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಚಾಮುಂಡೇಶ್ವರಿಯಲ್ಲಿ ಮೂರು ದಿನಗಳ ಪ್ರವಾಸ  ಮಾಡಿದೆ. 2006ರಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಹೇಗೆ ಅನ್ನೊದು ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ನಿಮ್ಮ‌ ಜೊತೆ ಈಗ ಶ್ರೀನಿವಾಸ ಪ್ರಸಾದ್ ಇಲ್ಲ, ಈಗ ಜನತೆ ಸಿದ್ದರಾಮಯ್ಯಗೆ ಪಾಠ ಕಲಿಸುತ್ತಾರೆ ಎಂದರು‌.

ಜಾತ್ಯತೀತವಾದಿ ಸಿದ್ದರಾಮಯ್ಯ, ಜಾತಿ ಮುಖಂಡರುಗಳಿಂದ ತಮ್ಮ‌ ಪರ ಹೇಳಿಕೆ‌ ಕೊಡಿಸುತ್ತಿದ್ದಾರೆ ಎಂದು ದೂರಿದರು. ಹನುಮಂತಪ್ಪ ಆಲ್ಕೋಡ್ ಪಕ್ಷ ಬಿಡುವ ವಿಚಾರದ ಬಗ್ಗೆ  ಮಾತನಾಡಿದ ಹೆಚ್ಡಿಕೆ ಯಾರೇ ಪಕ್ಷ ಬಿಟ್ಟ ಹೊದರೂ ಹೋಗಲಿ, ಬಂದೆರೆ ಬರಲಿ, ಅವರಿಗೆ 2008ರಲ್ಲಿ ಶಿರಹಟ್ಟಿ, 2013ರಲ್ಲಿ ಹುಬ್ಬಳ್ಳಿಯಲ್ಲಿ ಟಿಕೆಟ್ ಕೇಳಿದ್ದರು ಕೊಟ್ಟಿದ್ದೆ. ಈಗಲೂ ಅವರಿಗೆ  ನಾನು ಪಕ್ಷ ಬಿಡದಂತೆ ಸಲಹೆ‌ ನೀಡಿದ್ದೇನೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ