ಕೇಕ್ ತಿಂದ 11ಮಂದಿ ಆಸ್ಪತ್ರೆಗೆ ದಾಖಲು

11 people are sudden ill health because of bakery food

06-04-2018

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಬೇಕರಿಯೊಂದರಲ್ಲಿ ಖರೀದಿಸಿದ್ದ ಕೇಕ್ ತಿಂದ ಗರ್ಭಿಣಿ ಸೇರಿದಂತೆ 11ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಒಂದೇ ಬೇಕರಿಯಲ್ಲಿ ಖರೀದಿಸಿದ್ದ ಗರ್ಭಿಣಿ ಹಾಗೂ ಮಕ್ಕಳು ಕೇಕ್ ತಿಂದ ತಕ್ಷಣ ವಾಂತಿ ಭೇದಿ ಮಾಡಿಕೊಂಡು ಅಸ್ವಸ್ಥರಾದರು. ಅವರಿಗೆ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕ್ಸತೆಗಾಗಿ ಮಂಡ್ಯ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಪ್ರಾಣಾಪಾಯದಿಂದ ಮಕ್ಕಳು ಹಾಗೂ ಗರ್ಭಿಣಿ  ಪಾರಾಗಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ವೃತ್ತ(ದುರ್ಗಾಭವನ್)ದಲ್ಲಿರುವ ಸರಸ್ವತಿ ಬೇಕರಿಯಲ್ಲಿ ಸಂಜೆ ಕೇಕನ್ನು ಖರೀದಿಸಿದ್ದರು. ಮೂರು ವರ್ಷದ ಧನ್ಯ ಮತ್ತು ಎರಡು ವರ್ಷದ ಗುಂಡು ಎಂಬ ಇಬ್ಬರು ಮಕ್ಕಳನ್ನು ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸ್ವಸ್ಥಗೊಳ್ಳುತ್ತಿರುವ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

cake Backery ವಾಂತಿ ಭೇದಿ ಅಸ್ವಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ