ಬೆಳ್ಳಂಬೆಳಗ್ಗೆ ಚೆಸ್ಕಾಂ ಅಧಿಕಾರಿಗೆ ಎಸಿಬಿ ಶಾಕ್

Kannada News

16-05-2017

ಮೈಸೂರು: ಚೆಸ್ಕಾಂ ಅಧಿಕಾರಿ ಸಿದ್ದಲಿಂಗಸ್ವಾಮಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಟಿ.ನರಸೀಪುರ ಪಟ್ಟಣದ ವಿದ್ಯೋದಯ ವೃತ್ತ, ತೇರಿನ ಬೀದಿಯಲ್ಲಿರುವ ನಿವಾಸ, ಹೊರವಲಯದ ತೋಟದ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು ಒಂದು ಗಂಟೆಯಿಂದಲೂ ಕಡತಗಳ ಪರಿಶೀಲನೆ ನಡೆಸಿದರು. ಎಸಿಬಿ ಎಸ್.ಪಿ ಬಿ.ಟಿ ಕವಿತಾ ಮಾರ್ಗದರ್ಶನದಲ್ಲಿ ಚಾಮರಾಜನಗರ ಎಸಿಬಿ ಪ್ರಭಾಕರ್ ರಾವ್ ಶಿಂಧೆ ನೇತೃತ್ವದಲ್ಲಿ ದಾಳಿ ನಡೆಸಿದ್ದು ಸಿದ್ದಲಿಂಗಸ್ವಾಮಿ ಎಂಬುವವರು ಚಾಮರಾಜನಗರ ಚೆಸ್ಕಾಂನಲ್ಲಿ ಸುಪರ್‌ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ