ಜೆಡಿಎಸ್ ಮತ್ತೊಂದು ವಿಕೆಟ್ ಪತನ?

one more JDS leader ready to leave party?

05-04-2018

ಬೆಂಗಳೂರು: ಈಗಾಗಲೇ ಪಕ್ಷಾಂತರ ಕಾರಣಕ್ಕಾಗಿ 10ಕ್ಕೂ ಹೆಚ್ಚು ಶಾಸಕರನ್ನು ಕಳೆದು ಕೊಂಡಿರುವ ಜಾತ್ಯತೀತ ಜನತಾದಳ ಪಕ್ಷಕ್ಕೆ ಪಕ್ಷದ ಉಪಾಧ್ಯಕ್ಷರೊಬ್ಬರು ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಆಲ್ಕೋಡ್ ಹನುಮಂತಪ್ಪ ರಾಯಚೂರು ಜಿಲ್ಲೆಯವರು. ಈ ಹಿಂದೆ ದೇವದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಸಚಿವರಾಗಿದ್ದವರು. ಕಳೆದ ಬಾರಿ ಜೆಡಿಎಸ್ ನಿಂದ ಲಿಂಗಸುಗೂರು ಕ್ಷೇತ್ರದಲ್ಲಿ ಜಯಗೊಳಿಸಿದ್ದ ಮಾನಪ್ಪ ವಜ್ಜಲ್ ಈಗ ಪಕ್ಷಾಂತರ ಮಾಡಿ ಬಿಜೆಪಿ ಸೇರಿರುವುದರಿಂದ ಆಲ್ಕೋಡ್ ಹನುಮಂತಪ್ಪ ಆ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಟಿಕೆಟ್ ತಮ್ಮ ಕೈತಪ್ಪಿ ಸಿದ್ದು ಬಂಡಿ ಎಂಬುವರ ಪಾಲಾಗುವ ಸೂಚನೆ ದೊರೆತಿರುವುದರಿಂದ ಮನನೊಂದು ಜೆಡಿಎಸ್ ತೊರೆಯಲು ಸಿದ್ದರಾಗಿದ್ದಾರೆ ಎನ್ನುತ್ತಿದೆ ಅವರ ಆಪ್ತ ಮೂಲಗಳು. ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕಡೆಯ ದಿನದವರೆಗೆ ಈ ಪಕ್ಷಾಂತರ ಪರ್ವ ಮುಂದುವರಿಯಲಿದೆ.


ಸಂಬಂಧಿತ ಟ್ಯಾಗ್ಗಳು

alkod hanumanthappa JDS ವಿಧಾನಸಭಾ ನಾಮಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good from alkod sir jds nlli matin manushrugallu Illa sir moode momma nade Cong
  • Basavaraj Muranpur
  • Agreeculere