ಒಂದೇ ಗಂಟೆಯಲ್ಲಿ ಎರಡು ಕಡೆ ಸರಗಳ್ಳತನ

within one hour 2 chain snatch incidents

05-04-2018

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು, ದುಷ್ಕರ್ಮಿಯೊಬ್ಬ ಅನ್ನಪೂರ್ಣೇಶ್ವರಿ ನಗರದ ನಾಗರಬಾವಿಯ ಎರಡೂ ಕಡೆಗಳಲ್ಲಿ ಇಬ್ಬರು ಮಹಿಳೆಯರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾನೆ. ನಾಗರಬಾವಿಯ ಬಿಡಿಎ ಲೇಔಟ್‍ನ ಮನೆ ಮುಂಭಾಗ ರಾತ್ರಿ 8.05ರ ವೇಳೆ ನಿಂತಿದ್ದ ಸುಶೀಲ ಎನ್ನುವರ 30ಗ್ರಾಂ.ಸರವನ್ನು ಹಿಂದಿನಿಂದ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಕಸಿದು ಪರಾರಿಯಾಗಿದ್ದಾನೆ. ಒಬ್ಬನೇ ದುಷ್ಕರ್ಮಿ ಈ ಕೃತ್ಯ ನಡೆಸಿದ್ದಾನೆ.

ಇದಾದ 1 ಗಂಟೆಯೊಳಗೆ ನಾಗರಬಾವಿಯ 2ನೇ ಹಂತದ ಬಳಿ ನಡೆದು ಹೋಗುತ್ತಿದ್ದ ರಮಾಮಣಿ ಎಂಬುವರ 20ಗ್ರಾಂ.ತೂಕದ ಚಿನ್ನದ ಸರವನ್ನು ದುಷ್ಕರ್ಮಿ ಕಸಿದು ಪರಾರಿಯಾಗಿದ್ದಾನೆ. ಹಲಸೂರಿನ ಜೋಗುಪಾಳ್ಯದ ರಮಮಾಣಿಯವರು ನಾಗರಬಾವಿಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎರಡೂ ಕೃತ್ಯಗಳನ್ನು ಒಬ್ಬನೇ ದುಷ್ಕರ್ಮಿ ಮಾಡಿರುವ ಶಂಕೆಯಿದ್ದು, ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

ಇನ್ನೊಂದಡೆ ಹೆಚ್‍ಎಎಲ್‍ನ ದೊಡ್ಡನೆಕ್ಕುಂದಿಯ ಗುರುರಾಜ ಲೇಔಟ್‍ನ ಖಾಸಗಿ ಕಂಪನಿ ಉದ್ಯೋಗಿ ವಿಷ್ಣು ಎಂಬುವರ ಮನೆಗೆ ನಿನ್ನೆ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ನಗದು, ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಷ್ಣು ಅವರು ರಾತ್ರಿ ಮನೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳ್ಳತನ ನಡೆದಿದ್ದು, ಹೆಚ್‍ಎಎಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch one hour ಮಾಂಗಲ್ಯ ಸರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ