ಕೇಂದ್ರದ ವಿರುದ್ಧ ಕೃಷ್ಣ ಬೈರೇಗೌಡ ಕಿಡಿ

Krishna Byre Gowda

05-04-2018

ಬೆಂಗಳೂರು: ಕೇಂದ್ರ ಸರ್ಕಾರ ಹಣಕಾಸು ಆಯೋಗದ ಮಾನದಂಡಗಳನ್ನೇ ಬದಲಾಯಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ರಾಷ್ಟ್ರಪತಿಗಳು ಹಣಕಾಸು ಆಯೋಗವನ್ನು ನೇಮಿಸುತ್ತಾರೆ, ಆಯೋಗವು ತೆರಿಗೆ ಹಂಚಿಕೆ, ಸಂಗ್ರಹಗಳ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸು ಮಾಡುತ್ತದೆ. ಈಗಲೂ ಹದಿನೈದನೇ ಹಣಕಾಸು ಆಯೋಗ ರಚಿಸಲಾಗಿದೆ, ಆದರೆ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಚರ್ಚೆ ನಡೆಸದೇ, ರಾಜ್ಯಗಳ ಅಭಿಪ್ರಾಯ ಪಡೆಯದೇ ಮಾನದಂಡಗಳ ಬದಲಾವಣೆ ಮಾಡಿದೆ, ಇದು ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನವಾಗಿದೆ ಎಂದು ದೂರಿದರು. ಇದರಿಂದ ರಾಜ್ಯಗಳ ಮೇಲೆ ದೂರಗಾಮಿ ಪರಿಣಾಮಗಳಾಗುತ್ತವೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅನಾವಶ್ಯಕ ಗೊಂದಲ ಉಂಟಾಗಲಿದೆ, ಈ ಗೊಂದಲಗಳಿಗೆ ಕೇಂದ್ರವೇ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. 

 

 


ಸಂಬಂಧಿತ ಟ್ಯಾಗ್ಗಳು

krishana byre gowda president ಅಭಿಪ್ರಾಯ ಬದಲಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ