ಬೈಕ್ ಸವಾರನ ಪ್ರಾಣ ಉಳಿಸಿದ ಸಾರ್ವಜನಿಕರು

Highway accident: public saved bike rider

05-04-2018

ಬೆಂಗಳೂರು: ಇತ್ತೀಚೆಗೆ ಯಾವ ರೀತಿಯ ಅಪಘಾತ ನಡೆದರೂ ಗಾಯಗೊಂಡವರನ್ನು ರಕ್ಷಿಸುವ ಬದಲು ಮೊಬೈಲ್‍ನಲ್ಲಿ ಚಿತ್ರೀಕರಿಸುವ ಘಟನೆಗಳೇ ಹೆಚ್ಚುತ್ತಿದ್ದವು. ಆದರೆ ಅದಕ್ಕೆ ಅಪವಾದವೆನ್ನುವಂತಹ ಘಟನೆ ಯಲಹಂಕದಲ್ಲಿ ನಡೆದಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದವನನ್ನು ಸಾರ್ವಜನಿಕರೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ದೃಶ್ಯಗಳನ್ನು ಸೆರೆ ಹಿಡಿದಿರುವ ಸ್ಥಳೀಯರು ಅಪಘಾತವಾದಾಗ ಏನು ಮಾಡಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ವಿದ್ಯಾರಣ್ಯಪುರದ ಎಂಎಸ್ ಪಾಳ್ಯದಲ್ಲಿ ಬೈಕ್‍ಗೆ ಹಿಂದಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರ ಪವನ್ (18) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ವೇಳೆ ಹಿಂಬದಿ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿದ್ದವು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನನ್ನು ಸ್ಥಳೀಯರು ಸಮಯ ಪ್ರಜ್ಞೆಯಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತ ನಡೆದ ಒಂದು ಗಂಟೆ ಅವಧಿಯನ್ನು ವೈದ್ಯಕೀಯ ವಲಯದಲ್ಲಿ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ತೀವ್ರ ಗಾಯಗೊಂಡವರನ್ನು ಒಂದು ಗಂಟೆಯ ಒಳಗೆ ಆಸ್ಪತ್ರೆಗೆ ದಾಖಲಿಸಿದರೆ ಆತ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ರಸ್ತೆ ಅಪಘಾತವಾದಾಗ ಗಾಯಗೊಂಡವರನ್ನು ರಕ್ಷಿಸದೇ ವಿಡಿಯೋ ಮಾಡುತ್ತಾ ನಿಲ್ಲುವವರು ಈ ದೃಶ್ಯಗಳನ್ನು ನೋಡಿದರೆ ಮಾಡಬೇಕಾದ ಕೆಲಸ ಏನು ಎನ್ನುವುದು ಗೊತ್ತಾಗುತ್ತದೆ. ಘಟನೆ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Accident Bike ಅವಧಿ ಮಾನವೀಯತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ