ಶಿವರಾಜ್ ತಂಗಡಗಿಯಿಂದ ಮತದಾರರಿಗೆ ಆಮಿಷ!

shivaraj tangadagi: money for vote video viral

05-04-2018

ಕೊಪ್ಪಳ: ಕಾಂಗ್ರೆಸ್ ಶಾಸಕನಿಂದ ಮತದಾರರಿಗೆ ಹಣದ ಆಮಿಷ ಒಡ್ಡಿರುವುದು ಬೆಳಕಿಗೆ ಬಂದಿದೆ. ಚುನಾವಣೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿಯಿಂದ ಹಾಲುಮತ ಸಮುದಾಯದವರಿಗೆ ಹಣ ನೀಡುವ ಭರವಸೆ ನೀಡಿರುವುದು ಬೆಳಕಿಗೆ ಬಂದಿದೆ.

ಕೊಪ್ಪಳದ ಕನಕಗಿರಿ ತಾಲ್ಲೂಕಿನ ಜೀರಾಳ ಕಲ್ಗುಡಿಯಲ್ಲಿ ಮತದಾರರೊಂದಿಗೆ ಸಭೆ ಮಾಡಿದ್ದು, ಮೂರ್ನಾಲ್ಕು ದಿನದಲ್ಲಿ ಪ್ರತಿ ಪಂಚಾಯತಿಯಂತೆ ಹಣ ಕಳಿಸುವೆ, ಎಷ್ಟು ಹಣ ಬೇಕು ಕೇಳಿ ಕೊಡುತ್ತೇನೆ, ಅದಕ್ಕಾಗಿ ಹಣ ತೆಗೆದಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಬಿಸಿ ಇದ್ದಾಗ ಕಾಯಿಸಿಕೊಳ್ಳಬೇಕು, ಬಿಸಿ ರೊಟ್ಟಿಗೆ ಕಾರದ ಪುಡಿ ಹಾಕಿಕೊಂಡು ಊಟ ಮಾಡಿದರೆ ರುಚಿ ಬರುತ್ತೆ, ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ.

ಮಾಜಿ ಸಚಿವ, ಕುರುಬ ಸಮುದಾಯದ ಪ್ರಭಾವಿ ನಾಯಕ ನಾಗಪ್ಪ ಸಾಲೋನಿ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ ಹಿನ್ನೆಲೆ, ಕುರುಬ ಸಮುದಾಯದ ಮುಖಂಡರೊಂದಿಗೆ ಗುಪ್ತವಾಗಿ ಸಭೆ ಮಾಡಿದಾಗ ಈ ರೀತಿಯ ಆಮಿಷ ಒಡ್ಡಿದ್ದಾರೆ ಶಿವರಾಜ್ ತಂಗಡಗಿ. ಸಭೆಗೆ ಬಂದವರ ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಮಾತನಾಡಿದ್ದರಾದರೂ, ಮಾತುಕತೆ ವೇಳೆ ಹಣದ ಆಮಿಷ ಒಡ್ಡುತ್ತಿರುವುದನ್ನು ಯಾರೋ ಒಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

Shivaraj Tangadagi code of conduct ಸಮುದಾಯ ಮುಖಂಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ