ದಾಖಲೆ ರಹಿತ ನಗದು ಮತ್ತು ಸೀರೆಗಳು ವಶ

Non-record cash and sarees police seized

05-04-2018

ಬೆಂಗಳೂರು: ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಲಕ್ಷ ನಗದು ಹಾಗೂ 60 ಸೀರೆಗಳನ್ನು ದೇವನಹಳ್ಳಿಯ ಬಾಲೇಪುರ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಚುನಾವಣೆ ನಿಮಿತ್ತ ಅಕ್ರಮಗಳನ್ನ ತಡೆಯಲು ಬಾಲೇಪುರ ಬಳಿ ಚೆಕ್ ಪೋಸ್ಟ್ ಮಾಡಲಾಗಿದ್ದು, ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಆಂಧ್ರದಿಂದ ಹೊಸಕೋಟೆ ಮೂಲಕ ದೊಡ್ಡಬಳ್ಳಾಪುರದ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಪ್ಟ್ ಕಾರನ್ನ ತಪಾಸಣೆಗೆ ಒಳಪಡಿಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಎರಡು ಲಕ್ಷ ರೂಪಾಯಿಯನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಾರಿನಲ್ಲಿದ್ದ 60ಕ್ಕೂ ಹೆಚ್ಚು ಸೀರೆಗಳನ್ನ ಜಪ್ತಿ ಮಾಡಲಾಗಿದೆ. ಕಾರು ಚಾಲಕ ಬಾಬು ಎಂಬಾತನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

illegal cash check post ಚುನಾವಣಾಧಿಕಾರಿ ತಪಾಸಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ