ಪೊಲೀಸ್ ಮೇಲೆ ಹಲ್ಲೆಗೆ ಯತ್ನ: ರೌಡಿಗೆ ಗುಂಡೇಟು

Rowdy attempt to assault on police: shootout on rowdy

05-04-2018

ಬೆಂಗಳೂರು: ಬೆನ್ನಟ್ಟಿ ಬಂಧಿಸಲು ಬಂದ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಚರಣ್ ರಾಜ್‍ಗೆ ಮಹದೇವಪುರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಡೇಟು ತಗುಲಿ ಗಾಲಿಗೆ ಗಾಯಗೊಂಡಿರುವ ಮಹದೇವಪುರ ರೌಡಿ ಚರಣ್ ರಾಜ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ ಏ.2ರಂದು ಅಜಯ್ ಎಂಬಾತನ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಚರಣ್‍ರಾಜ್ ಇಂದು ಬೆಳಿಗ್ಗೆ 11.30ರ ವೇಳೆ ಸಿಂಗಯ್ಯನಪಾಳ್ಯ ರೈಲ್ವೆ ಗೇಟ್ ಬಳಿ ಇರುವ ಖಚಿತ ಮಾಹಿತಿ ಆಧರಿಸಿ ಮಹದೇವಪುರ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಪರಾರಿಯಾಗಲು ಯತ್ನಿಸಿದ ಚರಣ್‍ರಾಜ್ ಹಿಡಿಯಲು ಬಂದ ಪೇದೆ ಮಣಿ ಮೇಲೆ ಲಾಂಗ್ ಬೀಸಿ ತಪ್ಪಸಿಕೊಳ್ಳಲು ಯತ್ನಿಸಿದ್ದು, ಶರಣಾಗುವಂತೆ ಸೂಚಿಸಿದರೂ ಲಾಂಗ್ ಹಿಡಿದು ಬರುತ್ತಿದ್ದ ತಕ್ಷಣವೇ ಸ್ವಯಂರಕ್ಷಣೆಗಾಗಿ ಮಹದೇವಪುರ ಠಾಣೆ ಸಬ್‍ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಒಂದು ಗುಂಡು ಗಾಳಿಯಲ್ಲಿ ಹಾರಿ ಮತ್ತೊಂದು ಗುಂಡು ತಗುಲಿದ ಚರಣ್‍ ರಾಜ್ ಸ್ಥಳದಲ್ಲಿ ಕುಸಿದು ಬಿದ್ದಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಂಗ್‍ನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೇದೆ ಮಣಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಅಬ್ದುಲ್ ಅಹದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೌಡಿ ಚರಣ್‍ರಾಜ್ ಗುಣಮುಖನಾದ ನಂತರ ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Shoot out ಚಿಕಿತ್ಸೆ ಗುಣಮುಖ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ