ಸಿಲಿಂಡರ್ ಸ್ಫೋಟ: 9ಮಂದಿಗೆ ಗಂಭೀರ ಗಾಯ

Cylinder blast: 9 seriously injured

05-04-2018

ಬೆಂಗಳೂರು: ಪೀಣ್ಯದ ದಾಸರಹಳ್ಳಿಯಲ್ಲಿ ಇಂದು ಮುಂಜಾನೆ ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಮಕ್ಕಳು ಸೇರಿ 9 ಮಂದಿ ಗಂಭೀರ ಗಾಯಗೊಂಡಿದ್ದು ಅವರಲ್ಲಿ ನಾಲ್ವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ದಾಸರಹಳ್ಳಿಯ ದೇವರಾಜು (38), ಲಕ್ಷಮ್ಮ (45), ವೆಂಕಟೇಶ (38), ಮಹೇಳ್ವರಮ್ಮ (35) , ಹೋನ್ನೂರಪ್ಪ(70), ಸೋಮಶೇಖರ್(16), ನಿರಂಜನ್(7) ಸಂಗೀತ(16) ದೇವಿಕಾ (4) ಗಾಯಗೊಂಡಿದ್ದು ಅವರಲ್ಲಿ ನಾಲ್ವರು ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಪಾವಗಡ ಮೂಲದ ದೇವರಾಜು ಅವರ ಮನೆಗೆ ನಿನ್ನೆ ಸಂಬಂಧಿಕರು ಬಂದಿದ್ದರು. ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗುವಾಗ ಗ್ಯಾಸ್ ಆಫ್ ಮಾಡಿರಲಿಲ್ಲ. ದೇವರಾಜು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ರಾತ್ರಿ ಪಾಳಿಯಿದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದರು.

ಕೆಲಸ ಮುಗಿಸಿ ಮುಂಜಾನೆ 4.30ರವೇಳೆ ಮನೆಗೆ ಬಂದ ದೇವರಾಜ್ ಬಾಗಿಲು ತಟ್ಟಿದ್ದು ಈ ವೇಳೆ ಬಾಗಿಲು ತೆರೆಯಲು ಲೈಟ್ ಸ್ವಿಚ್ ಆನ್ ಮಾಡಿದಾಗ ರಾತ್ರಿಯಿಡಿ ಸೋರಿಕೆಯಾಗಿದ್ದ ಗ್ಯಾಸ್ ಸ್ಫೋಟಗೊಂಡು ಮನೆಯಲ್ಲಿದ್ದವರಿಗೆಲ್ಲಾ ಬೆಂಕಿ ತಗುಲಿದೆ ರಕ್ಷಣೆಗಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದವರು ಧಾವಿಸಿ ಬೆಂಕಿ ನಂದಿಸಿ ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂದು, ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Cylinder injured ಸ್ಫೋಟ ಗ್ಯಾಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ