ಇಸ್ಕಾನ್ ಅರ್ಚಕನ ಬರ್ಬರ ಕೊಲೆ

horrific murder of iskcon Priest at bengaluru

05-04-2018

ಬೆಂಗಳೂರು: ಇಸ್ಕಾನ್ ದೇವಾಲಯದ ಅರ್ಚಕ ಸಂಜಯ್ ಸತೀಶ್ ಎಂಬುವರನ್ನು ಕೈ ಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಕೆ.ಆರ್.ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ. ಒಂದು ವಾರದ ಹಿಂದೆಯೇ ಸಂಜಯ್ ಸತೀಶ್ ಕೊಲೆ ನಡೆದಿದ್ದು ಮೃತದೇಹದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇಸ್ಕಾನ್ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂಜಯ್ ಸತೀಶ್ ಬೆತ್ತಲ್‍ನಗರದ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು 15 ದಿನಗಳಿಗೊಮ್ಮೆ ಅಪಾರ್ಟ್‍ಮೆಂಟ್‍ಗೆ ಬಂದು ಒಂದೆರಡು ದಿನ ಉಳಿಯುತ್ತಿದ್ದ ಸಂಜಯ್, ಕಳೆದ ಬುಧವಾರ(ಮಾ.28)ರಂದು ಇಸ್ಕಾನ್‍ನಲ್ಲಿ ಪೂಜೆ ಮುಗಿಸಿಕೊಂಡು ಅಪಾರ್ಟ್‍ಮೆಂಟ್‍ಗೆ ಬಂದಿದ್ದರು.

ಈ ವೇಳೆಯಲ್ಲಿ ಅಪಾರ್ಟ್‍ಮೆಂಟ್‍ಗೆ ಬಂದಿದ್ದ ಕೆಲ ದುಷ್ಕರ್ಮಿಗಳು ಆತನ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದು ಒಂದು ವಾರವಾದರೂ ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ತಿಳಿದಿರಲಿಲ್ಲ. ನಿನ್ನೆ ರಾತ್ರಿ ಸಂಜಯ್ ಫ್ಲಾಟ್‍ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ಅಕ್ಕಪಕ್ಕದ ಮನೆಯವರು ಕೆ.ಆರ್.ಪುರಂ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂಜಯ್ ಸತೀಶ್ ಸುಮಾರು ವರ್ಷಗಳಿಂದ ಒಬ್ಬರೇ ಫ್ಲಾಟ್‍ನಲ್ಲಿ ವಾಸವಾಗಿದ್ದು ಅವರ ಹಿನ್ನೆಲೆ ಬಗ್ಗೆ ಅಪಾರ್ಟ್‍ಮೆಂಟ್ ವಾಸಿಗಳಿಗೆ ಯಾವುದೇ ಮಾಹಿತಿ ಇಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿ ಪ್ರಕರಣ ದಾಖಲಿಸಿರುವ ಕೆ.ಆರ್.ಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

iskon temple ಪರಿಶೀಲನೆ ಅಬ್ದುಲ್ ಅಹದ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ