ದೀಪಕ್ ರಾವ್ ಕೊಲೆ: 13 ಮಂದಿ ವಿರುದ್ಧ ಆರೋಪಪಟ್ಟಿ

Deepak Rao murder: charge sheet on 13 people

05-04-2018

ಮಂಗಳೂರು: ಕಳೆದ ಜನವರಿಯಲ್ಲಿ ಸುರತ್ಕಲ್ನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳ ವಿರುದ್ಧ, ಮಂಗಳೂರು 2ನೇ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದ ತನಿಖಾ ತಂಡದಿಂದ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಹಿಂದೂ ರೌಡಿಗಳ ಗುಂಪು ಮತ್ತು ಪಿಂಕಿ ನವಾಜ್ ನೇತೃತ್ವದ ಮುಸ್ಲಿಂ ತಂಡ ನಡುವೆ ವೈರತ್ವದ ಹಿನ್ನೆಲೆಯಲ್ಲಿ, ಹಿಂದೂ ರೌಡಿಗಳಲ್ಲಿ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಅಂಶ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಚು ರೂಪಿಸಿದ್ದ ಆರೋಪಿಗಳು ದೀಪಕ್ ನನ್ನು ಆಯ್ಕೆಮಾಡಿಕೊಂಡು ಕೊಲೆಗೈಯ್ಯಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸುಮಾರು 500ಪುಟಗಳ ಆರೋಪ ಪಟ್ಟಿಯಲ್ಲಿ ಈ ಅಂಶಗಳ ಉಲ್ಲೇಖವಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

murder deepak rao ಸುರತ್ಕಲ್ ಚಾರ್ಜ್ ಶೀಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ