ಕೇಂದ್ರದ ವಿರುದ್ಧ ರೈ ವಾಗ್ದಾಳಿ

Rai dialogue with journalists at shimoga

05-04-2018

ಶಿವಮೊಗ್ಗ: ಜಿಲ್ಲೆಯ ಸರ್ಕಾರಿ ನೌಕರರ ಭವನದಲ್ಲಿ ಮಾಧ್ಯಮದವರೊಂದಿಗೆ ನಟ ಪ್ರಕಾಶ್ ರೈ ಸಂವಾದ ನಡೆಸಿದ್ದಾರೆ. ಸಂವಾದದಲ್ಲಿ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ನಾನು ಭಾರತ ದೇಶದ ಪ್ರಜೆ ಎಂದು ರೈ ಹೇಳಿದ್ದಾರೆ. ಪತ್ರಕರ್ತನ ಹಕ್ಕನ್ನು ಕಸಿದುಕೊಳ್ಳುವ ಯತ್ನ ನಡೆಸಲಾಯ್ತು, ಆದರೆ ಪತ್ರಕರ್ತರನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. 

ಇದೇ ವೇಳೆ ಕೆಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡಸಿದ ಅವರು, ಚುನಾವಣೆಯಲ್ಲಿ ಗೆದ್ದ ನಂತರ, ಅವರ ಸಿದ್ಧಾಂತಗಳನ್ನು ಎಲ್ಲರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಆಹಾರ ಪದ್ಧತಿಯ ಬಗ್ಗೆ ಯಾಕೆ ಮಾತನಾಡುಡ್ತಾರೆ, ಪ್ರತಿಯೊಂದು ಊರಿನಲ್ಲೂ ಅವರದ್ದೇ ಆಹಾರ ಪದ್ಧತಿ ಇದೆ. ಕೆಲಸ ಕೊಡ್ತೀವಿ ಅಂದವರು ಎಲ್ಲಿ ಕೊಟ್ಟಿದ್ದಾರೆ. ಕಪ್ಪುಹಣ ತರ್ತೀವಿ ಅಂತ ಹೇಳಿದ್ದರು, ಎಲ್ಲಿದೆ ಹಣ ಎಂದು ಪ್ರಶ್ನಿಸಿದ್ದಾರೆ.

ನಾನು ಯಾವ ರಾಜಕೀಯ ಪಕ್ಷದಿಂದ ಬೆಳೆದಿಲ್ಲ ಎಂದ ಅವರು, ಗೌರಿ ಹತ್ಯೆಯನ್ನು ವಿಜೃಂಭಿಸಿತ್ತಿದ್ದೀರಿ ಎಂದರೆ ನನ್ನ ಮೇಲೆ ತಿರುಗಿ ಬಿದ್ದಿದ್ದರು. ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಾರೆ ಇದು ಸರಿಯಲ್ಲ. ಇದರ ಬಗ್ಗೆ  ಮಾತನಾಡಿದರೇ ನನ್ನ ತಾಯಿಯ ಜಾತಿಯ ಬಗ್ಗೆ ಮಾತನಾಡುತ್ತಾರೆ. ಸುಳ್ಳುಗಳಲ್ಲಿ ಬದುಕುವ ಅವಶ್ಯಕತೆ ಇಲ್ಲ. ಸುಳ್ಳುಗಳಿಗೆ ಬಹಳ ಶಕ್ತಿ ಇದೆ, ಅದು ಎಲ್ಲರನ್ನು ನಂಬಿಸುತ್ತದೆ ಎಂದು ಕೆಂದ್ರದ ವಿರುದ್ಧ ಚಾಟಿ ಬೀಸಿದ್ದಾರೆ. 

ನಿಮ್ಮ ಮತದಾನದ ಹಕ್ಕನ್ನು ಮಾರಿ ಕೊಳ್ಳಬೇಡಿ. ಇದರ ಬಗ್ಗೆ ನೀವು ನಾವು ಯೋಚನೆ ಮಾಡಬೇಕು. ಮೊದಲು ನಮ್ಮನ್ನ ನಾವು ಮಾರಿಕೊಳ್ಳಬಾರದು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ದೊಡ್ಡ ರೋಗವನ್ನು ದೇಶದಿಂದ ತಪ್ಪಿಸಬೇಕು, ಕೋಮುವಾದ ತಪ್ಪಿಸಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Prakash Raj Narendra modi ಮತದಾನ ಕಪ್ಪುಹಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ