'ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ'05-04-2018

ಕಲಬುರ್ಗಿ: ಜೇವರ್ಗಿ ಶಾಸಕ ಅಜೇಯಸಿಂಗ್ ಬಿಜೆಪಿ ಸೇರುತ್ತಾರೆ ಎಂಬ ವದಂತಿಯನ್ನು ಅಲ್ಲಗಳೆದಿದ್ದಾರೆ.  ಯಾರೊ ತಮಗಾಗದವರು ಸೃಷ್ಟಿಸಿರುವ ವದಂತಿ ಇದು ಎಂದು, ಅಜೇಯಸಿಂಗ್ ಸ್ಪಷ್ಟಪಡಿಸಿದ್ದಾರೆ. ನನ್ನ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ನಮ್ಮ ತಂದೆ ಧರ್ಮಸಿಂಗ್ರನ್ನು ಮುಖ್ಯಮಂತ್ರಿ ಮಾಡಿದ ಪಕ್ಷ ಕಾಂಗ್ರೆಸ್. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ನಮ್ಮ ತಂದೆ ಕಾಂಗ್ರೆಸ್ ತೊರೆದಿರಲಿಲ್ಲ, ಹೀಗಿರಬೇಕಾದರೆ ನಾನೇಕೆ ಕಾಂಗ್ರೆಸ್ ತೊರೆಯಲಿ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ, ಇದು ಕೇವಲ ಊಹಾಪೋಹವಷ್ಟೆ ಎಂದು ಶಾಸಕ ಅಜೇಯಸಿಂಗ್ ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ajay Singh Jevargi MLA ವದಂತಿ ಊಹಾಪೋಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ