'ಅಮಿತ್ ಷಾ ನಿರ್ಧಾರಕ್ಕೆ ನಾವೆಲ್ಲ ಬದ್ಧ'

Bsy reaction on janardhan reddy

04-04-2018

ಬೆಂಗಳೂರು: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಕುರಿತು ರಾಜ್ಯದ ಪ್ರತಿ ಕ್ಷೇತ್ರದ ಅಭಿಪ್ರಾಯ ಪಡೆಯುತ್ತಿದ್ದೇವೆ, ಎಲ್ಲಾ ಮುಗಿದ ಬಳಿಕ ಇದೇ ಅಭಿಪ್ರಾಯವನ್ನು ಅಮಿತ್ ಷಾ ಅವರಿಗೆ ಕೊಡುತ್ತೇವೆ, ಅಮಿತ್ ಷಾ ಅವರು ನಡೆಸಿರುವ ಸರ್ವೆ ಮತ್ತು ಈ ಅಭಿಪ್ರಾಯ ಎಲ್ಲವನ್ನೂ ಆಧರಿಸಿ ಅಮಿತ್ ಷಾ ನಿರ್ಧಾರ ತೆಗೆದುಕೊಳ್ಳಲಿದ್ದಾರೆ, ಅದಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಕಳಂಕಿತರಿಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎಂದ ಬಿಎಸ್ ವೈ, ಕಳಂಕಿತರ ಮೇಲೆ ಕ್ರಿಮಿನಲ್ ಕೇಸ್ ಇದ್ದರೆ ಅಮಿತ್ ಷಾ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಇನ್ನು ಜನಾರ್ದನ ರೆಡ್ಡಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಶ್ರೀರಾಮುಲು ನಮ್ಮ ಜೊತೆ ಇದ್ದಾರೆ, ಜನಾರ್ದನ ರೆಡ್ಡಿ ಅವರನ್ನು ನಾನು ಇತ್ತೀಚೆಗೆ ಭೇಟಿ ಮಾಡಿಲ್ಲ, ಶ್ರೀರಾಮುಲು ಬಳ್ಳಾರಿಯಲ್ಲಿ ಎಲ್ಲಾ ನೋಡಿಕೊಳ್ಳುತ್ತಿದ್ದಾರೆ. ಬಳ್ಳಾರಿಯಲ್ಲಿ ಯಾರೆಲ್ಲಾ ಆಕಾಂಕ್ಷಿಗಳು ಇದ್ದಾರೋ ಎಲ್ಲಾ ವರದಿ ತರಿಸಿಕೊಂಡು ಅಮಿತ್ ಷಾ ಅವರಿಗೆ ಕೊಡುತ್ತೇವೆ, ಅಮಿತ್ ಷಾ ಅವರು ನಿರ್ಧಾರ ತಗೋತಾರೆ. ಬಳ್ಳಾರಿಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

B.S.Yeddyurappa B.Sriramulu ಕ್ರಿಮಿನಲ್ ವಿಶ್ವಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ