ದಲಿತರಿಗೆ ಜಾತಿ ಗಣತಿ ಬಲ

Kannada News

15-05-2017

ಚಿತ್ರದುರ್ಗ: ಬ್ರಿಟೀಷರ ಕಾಲದಲ್ಲಿ ಮಾಡಿದ್ದ ಜಾತಿ ಗಣತಿ ಜಾರಿಯಲ್ಲಿದೆ, ಹೀಗಾಗಿ ಹಿಂದುಳಿದ ಜಾತಿಗಳಿಗೆ ಸಮರ್ಪಕವಾದ ಮೀಸಲಾತಿ ಸಿಗುತ್ತಿಲ್ಲ, ಈ ಕಾರಣದಿಂದಲೇ ರಾಜ್ಯದಲ್ಲಿ ಜಾತಿ ಗಣತಿ ಮಾಡಿಸಿದ್ದೇವೆ, ಕೆಲವೇ ದಿನಗಳಲ್ಲಿ ಗಣತಿ ಪಟ್ಟಿ ಬಹಿರಂಗ ಮಾಡಲಾಗುವುದು, ಯಾವುದೇ ರಾಜಕೀಯ ಉದ್ದೇಶಕ್ಕೆ ಜಾತಿಗಣತಿ ಮಾಡಿಸಿಲ್ಲ, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡುವ ಉದ್ದೇಶದಿಂದ ಮಾಡಲಾಗಿದೆ, ಜಾತಿ ಗಣತಿ ಮಾಹಿತಿ ಸೋರಿಕೆ ಆಗಿಲ್ಲ, 2011ರ ಜನಗಣತಿ ಆಧಾರದ ಮೇಲೆ ಮಾಧ್ಯಮಗಳು ಅಂಕಿ-ಅಂಶ ಬಿಡುಗಡೆ ಮಾಡಿವೆ, ಆದರೆ ನಾವು ಕೊಡುವ ಅಂಕಿ ಅಂಶಗಳು ಮಾತ್ರ ಅಧಿಕೃತ, ಮಂತ್ರಿಯಾಗಿ ನನಗೇ ಮಾಹಿತಿ ಸಿಕ್ಕಿಲ್ಲ, ಮಾಹಿತಿ ಸೋರಿಕೆಯಾಗಲು ಹೇಗೆ ಸಾಧ್ಯ? ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿಕೆ.
ಬಿಜೆಪಿಯವರು ಏನೇ ಮಾಡಿದರೂ ನಮ್ಮ ಓಟ್ ಬ್ಯಾಂಕ್ ಒಡೆಯಲು ಸಾಧ್ಯವಿಲ್ಲ, ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಓಲೈಕೆ ಮಾಡುತ್ತಿದ್ದಾರೆ, ನಿಜವಾಗಲೂ ದಲಿತರ ಬಗ್ಗೆ ಕಾಳಜಿ ಇದ್ದವರು ಮೊನ್ನೆ ಹಾವೇರಿ ಜಿಲ್ಲೆಯಲ್ಲಿ ದಲಿತರ ಮದುವೆ ನಡೆಯುತ್ತಿದ್ದ ವೇಳೆ ಇಡೀ ಗ್ರಾಮವನ್ನೇ ಬಂದ್ ಮಾಡಿಸಿದ್ದ ಸವರ್ಣೀಯರಿಗೆ ಬುದ್ದಿ ಹೇಳಲಿ ಎಂದು ಸವಾಲ್.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ