'ಯುದ್ಧ ಘೋಷಣೆ ಮಾಡಿದಂತೆ ವರ್ತಿಸೋದು ಸರಿಯಲ್ಲ'

o.p.rawat held meeting with political parties leaders

04-04-2018

ಬೆಂಗಳೂರು: ರಾಜಕೀಯ ಪಕ್ಷಗಳ ಮುಖಂಡರ ಜೊತೆ ಕೇಂದ್ರ ಚುನಾವಣಾ ಆಯುಕ್ತ ಒ.ಪಿ.ರಾವತ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಚುನಾವಣಾ ಆಯೋಗದ ಬಿಗಿ ನಿಯಮ ಸಡಿಲುಸುವಂತೆ, ಬಿಜೆಪಿ ಮುಖಂಡ ಅಶ್ವತ್ ನಾರಾಯಣ್ ಮನವಿ ಮಾಡಿದ್ದಾರೆ. ಪತ್ರಿಕಾ ಭವನ ಹೊರತುಪಡಿಸಿ ಬೇರೆಡೆ ಸುದ್ದಿಗೋಷ್ಠಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ, ಜಿಲ್ಲೆಗೆ ಒಂದು ಮಾತ್ರ ಪತ್ರಿಕಾ ಭವನ ಇದೆ, ಹೋಟೆಲ್ ಅಥವ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಲು ಆವಕಾಶ ನೀಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಬೈಕ್ ರ‍್ಯಾಲಿಗೆ 10ಜನಕ್ಕೆ ಮಾತ್ರ ಆವಕಾಶದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ನಂತರ ಮಾತನಾಡಿದ ಅವರು, ಯುದ್ಧ ಘೋಷಣೆ ಮಾಡಿದಂತೆ ವರ್ತಿಸೋದು ಸರಿಯಲ್ಲ, ತುರ್ತು ಪರಿಸ್ಥಿತಿ ಘೋಷಣೆ ರೀತಿಯಲ್ಲಿ ಚುನಾವಣೆ ನಡೆಸಲಾಗುತ್ತಿದೆ, ಮುಕ್ತವಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟೀ, ಕಾಫಿ ಕೊಡಲು ಕೂಡ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದರು. ವಾಹನಗಳ ಪರವಾನಗಿ ಪಡೆಯಲು ಮೂಲ ದಾಖಲೆ ತರುವಂತೆ ಅಧಿಕಾರಿಗಳು ಕೇಳುತ್ತಿದ್ದಾರೆ, ಚುನಾವಣಾ ಪ್ರಚಾರ ವಾಹನ ಪರವಾನಿಗೆಗೆ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು, ದೂರದಿಂದ ಬಂದ ಕಾರ್ಯಕರ್ತರಿಗೆ ತಿಂಡಿ ಕೊಡಲು ಆವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ