ಕಾರು ಚಾಲಕನ ಮೇಲೆ ಹಲ್ಲೆ, ದರೋಡೆ

The car driver was assaulted and robbed

04-04-2018

ಬೆಂಗಳೂರು: ಬ್ಯಾಟರಾಯನಪುರದಲ್ಲಿ ಕಾರು ಹಿಂದಿಕ್ಕುವ ವಿಚಾರದಲ್ಲಿ ಜಗಳ ಮಾಡಿದ ಬೈಕ್‍ನಲ್ಲಿದ್ದ ಇಬ್ಬರು ಕಾರು ಚಾಲಕನ ಮೇಲೆ ಹಲ್ಲೆ ಮಾಡಿ 5 ಸಾವಿರ ನಗದು, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರುವ ಕಾರು ಚಾಲಕ ನವಾಜ್ ಅಹ್ಮದ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೃತ್ಯವೆಸಗಿದ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

ಬ್ಯಾಟರಾಯನಪುರದ ಗರಗನಪಾಳ್ಯದ ಬಳಿ ಮಂಗಳವಾರ ರಾತ್ರಿ 11ರ ವೇಳೆ ನವಾಜ್ ಅಹ್ಮದ್ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ಹಿಂದಿಕ್ಕಲು ಹೋದಾಗ ಗಲಾಟೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಬೈಕ್‍ನಲ್ಲಿದ್ದ ಇಬ್ಬರು ನವಾಜ್ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

driver Ravi channannavar ಬೈಕ್‍ ಪ್ರಾಣಾಪಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ