ಯುವತಿಯೊಂದಿಗೆ ರೌಡಿಯ ಅಸಭ್ಯ ವರ್ತನೆ

sexual harassment on a girl by rowdy: police arrested

04-04-2018

ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿ ದೂರವಾಗಿದ್ದಕ್ಕೆ ಆಕ್ರೋಶಗೊಂಡು ಆಕೆಯ ಮೇಲೆ ಹಲ್ಲೆ ಮಾಡಿ ಪ್ಯಾಂಟ್‍ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ ರೌಡಿಯೊಬ್ಬನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಆರ್ಎಸ್ ನಗರದ ಜಾನ್ ಅಲಿಯಾಸ್ ಜಾನ್ ಹೆರಾಲ್ಡ್ (30) ಬಂಧಿತ ಆರೋಪಿಯಾಗಿದ್ದಾನೆ. ಕೊಲೆಯತ್ನ, ಸುಲಿಗೆ, ಅಪಹರಣ ಸೇರಿದಂತೆ ಗಂಭೀರ ಪ್ರಮಾಣದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಾನ್ ಬಾಣಸವಾಡಿಯ ರೌಡಿಪಟ್ಟಿಯಲ್ಲಿದ್ದಾನೆ.

ಏಳು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಆಕೆ ಕಾರಣಾಂತರಗಳಿಂದ ತನ್ನಿಂದ ದೂರವಾಗಿದ್ದಕ್ಕೆ ಆಕ್ರೋಶಗೊಂಡು ಕಿರುಕುಳ ನೀಡುತ್ತಿದ್ದ  ನಾಲ್ಕೈದು ದಿನಗಳ ಹಿಂದೆ ಯುವತಿಯ ಮನೆಗೆ ಹೋಗಿ ಆಕೆಯ ಮೇಲೆ ಹಲ್ಲೆ ಮಾಡಿ ತಾಯಿಯ ಜೊತೆ ಜಗಳ ಮಾಡಿದ್ದ.

ಮತ್ತೆ ಮೂರು ದಿನಗಳ ಹಿಂದೆ ಯುವತಿಯನ್ನು ಮಾತನಾಡುವ ನೆಪದಲ್ಲಿ ಪಾಪಣ್ಣ ಲೇಔಟ್‍ಗೆ ಕರೆಸಿಕೊಂಡು ಆಕೆಯ ಮುಂದೆ ಪ್ಯಾಂಟ್‍ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಬಿಟ್ಟು ಬೇರೊಬ್ಬನನ್ನು ಹೇಗೆ ಮದುವೆಯಾಗುತ್ತೀಯಾ ಎಂದು ಹೆದರಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಜಾನ್, ಕೊಲೆ ಬೆದರಿಕೆ ಸಹ ಹಾಕಿದ್ದ ಎಂದು ಯುವತಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸ್ ಇನ್ಸ್ಪೆಪೆಕ್ಟರ್ ಮುನಿಕೃಷ್ಣ ಅವರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆ ಬೆದರಿಕೆ, ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ