'ಸದ್ಯಕ್ಕಿಲ್ಲ ವಿದ್ಯುತ್ ದರ ಪರಿಷ್ಕರಣೆ'

No electricity rate revision: up to election finishes

04-04-2018

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ವಾರ್ಷಿಕ ವಿದ್ಯುತ್ ದರ ಹೆಚ್ಚಳ ಪ್ರಕ್ರಿಯೆ ವಿಳಂಬವಾಗಲಿದೆ. ಉದ್ದೇಶಿತ ವಿದ್ಯುತ್ ದರ ಪರಿಷ್ಕರಣೆಗೆ ಸಾರ್ವಜನಿಕರ ಆಕ್ಷೇಪ ಪ್ರಕ್ರಿಯೆ ಮುಗಿದಿದ್ದು, ವಿದ್ಯುತ್ ಆಯೋಗ ಹೊಸ ದರವನ್ನು ಇನ್ನೇನು ಘೋಷಿಸಬೇಕೆನ್ನುವಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಕಳೆದ 2013ರಲ್ಲಿ ವಿಧಾನಸಭೆ ಚುನಾವಣೆಯಿಂದಾಗಿ ವಿದ್ಯುತ್ ದರ ಘೋಷಣೆ ವಿಳಂಬವಾಯಿತು. ಈ ಬಗ್ಗೆ ಚುನಾವಣಾ ಆಯೋಗ ಯಾವುದೇ ಘೋಷಣೆ ಮಾಡುವಂತಿಲ್ಲ ಎಂದು ಲಿಖಿತ ಸ್ಪಷ್ಟನೆ ನೀಡಿತ್ತು, ನಂತರದ 2014ನೇ ವರ್ಷದಲ್ಲಿ ಕೂಡ ಲೋಕಸಭೆ ಚುನಾವಣೆಯಿದ್ದರಿಂದ ವಿದ್ಯುತ್ ದರ ಪರಿಷ್ಕರಣೆಯನ್ನು ಘೋಷಿಸಿರಲಿಲ್ಲ.

ಈ ವರ್ಷ ಮಾರ್ಚ್ 2ಕ್ಕೆ ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಕೆ ಪ್ರಕ್ರಿಯೆಯನ್ನು ಮುಗಿಸಿದ್ದೆವು. ಆದರೆ ಚುನಾವಣಾ ಆಯೋಗದ ಆದೇಶದ ಪ್ರಕಾರ, ವಿದ್ಯುತ್ ದರ ಪರಿಷ್ಕರಣೆಯನ್ನು ಘೋಷಿಸಲು ಸಾಧ್ಯವಿಲ್ಲ, ಹೀಗಾಗಿ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ವಿದ್ಯುತ್‍ದರ ಪರಿಷ್ಕರಣೆ ಮಾಡುವುದಿಲ್ಲ ಎಂದು ಕೆ.ಇ.ಆರ್.ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ತಿಳಿಸಿದ್ದಾರೆ.

ಈ ವರ್ಷ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರತಿ ಯೂನಿಟ್ ವಿದ್ಯುತ್‍ಗೆ ಎಲ್ಲಾ ವರ್ಗದ ಜನರಿಗೆ 82 ಪೈಸೆ ಏರಿಕೆ ಮಾಡುವಂತೆ ಕೋರಿದೆ. ಬೆಸ್ಕಾಂ ವಿರುದ್ಧ ಬೆಂಗಳೂರು ನಿವಾಸಿಗಳಿಂದ ಹಲವು ದೂರುಗಳು ಕೇಳಿಬಂದಿವೆ.


ಸಂಬಂಧಿತ ಟ್ಯಾಗ್ಗಳು

Electricity unit ನೀತಿ ಸಂಹಿತೆ ಲೋಕಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ