ಸುಪ್ರೀಂ ತೀರ್ಪು ಖಂಡಿಸಿ ಪ್ರತಿಭಟನೆ

protest against supreme court verdict on sc/sc act

04-04-2018

ಬೆಂಗಳೂರು: ಪರಿಶಿಷ್ಟರ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಉತ್ತರ ಭಾರತದ ಕೆಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಇದೀಗ ಪ್ರತಿಭಟನೆಗೆ ಬೆಂಗಳೂರಲ್ಲೂ ಬೆಂಬಲ ಸೂಚಿಸಿದ್ದಾರೆ. ಜ್ಞಾನ ಭಾರತಿ ಆವರಣದ ಬೆಂಗಳೂರು ವಿಶ್ವವಿದ್ಯಾಲಯ ಬಂದ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶಿಕ್ಷಕರ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಬೋಧಕರು, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು, ಸಂಶೋಧಕರು ಸೇರಿದಂತೆ ನೂರಾರು‌ ಜನ ಭಾಗಿಯಾಗಿದ್ದರು.

ವಿವಿಯ ಎಲ್ಲ ವಿಭಾಗಗಳನ್ನ ಬಂದ್ ಮಾಡುವ ಮೂಲಕ ಸುಪ್ರೀಂ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ದೂರ ಶಿಕ್ಷಣ ನಿರ್ದೇಶಕ ಮೈಲಾರಪ್ಪ, ಎಚ್ಚರಿಕೆಯ ದ್ಯೋತಕವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ದಲಿತರಿಗೆ ದೇಶದಲ್ಲಿ ದೌರ್ಜನ್ಯವಾಗಿದೆ, ರಾಷ್ಟ್ರವ್ಯಾಪಿ ನಾವು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ, ಸಂವಿಧಾನ ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಾ ಕವಚವಾಗಿತ್ತು. 1989ರ ಕಾಯ್ದೆಯನ್ನು ಉಳಿಸಿಕೊಳ್ಳುವ ಬದಲು ಅದನ್ನು ಕುಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಕಾಯ್ದೆ ದುರ್ಬಳಕೆ ಆದರೆ ಕ್ರಮ ಕೈಗೊಳ್ಳುವ ಬದಲು ಕಾಯ್ದೆಯನ್ನೇ ದುರ್ಬಲಗೊಳಿಸುವುದು ಸರಿಯಲ್ಲ, ದೂರು ನೀಡಿದಾಗ ಅದನ್ನು ಪರಿಗಣಿಸದೇ ಕ್ರಮ ಕೈಗೊಳ್ಳುವ ಬದಲು ತನಿಖೆ ಮಾಡಬೇಕು ಎನ್ನುವುದು ನಿಜಕ್ಕೂ ವಿಪರ್ಯಾಸ. ತೀರ್ಪಿನಿಂದ ಏಳು ಲಕ್ಷ ಹಳ್ಳಿಗಳಲ್ಲಿರುವ ದಲಿತರಿಗೆ ಅನ್ಯಾಯವಾಗುತ್ತೆ, ಶೋಷಣೆಯನ್ನು ಪ್ರಶ್ನಿಸುವುದನ್ನೇ ನಾವು ಮರೆಯಬೇಕಾಗುತ್ತೆ, ಅವರಿಗೆ ರಕ್ಷಣೆ ಕೊಡುವರು ಯಾರು ಇಲ್ಲದಾಗುತ್ತೆ, ಈ ಕಾನೂನನ್ನು ರದ್ದು ಮಾಡುವ ಹುನ್ನಾರ ಇದು ಎಂದರು.

ಸಂವಿಧಾನವನ್ನೇ ಬದಲಿಸುವ ಬಗ್ಗೆಯೂ ಮಾತನಾಡುವವರೂ ಸಹ ಕಡಿಮೆ ಇಲ್ಲ, 5000ಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಮೇಲೆ ದೌರ್ಜನ್ಯದ ಕೇಸ್ಗಳು ರಾಜ್ಯದಲ್ಲಿ ದಾಖಲಾಗಿವೆ. ಬೆಂಗಳೂರು ವಿವಿಯಲ್ಲಿ ಜಾಗೃತ ವಿದ್ಯಾರ್ಥಿ ಸಮೂಹ ಇದೆ. ರಾಜ್ಯದ 21 ವಿವಿಗಳಲ್ಲೂ ನಾಳೆಯಿಂದ ಬಂದ್ ನಡೆಸಲಾಗುವುದು. ಮತ್ತು 5ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ ಈ ತೀರ್ಪಿನ ವಿರುದ್ಧ ನಮ್ಮ ಹೋರಾಟ ಇದ್ದೇ ಇದೆ, ಪ್ರಜ್ಞಾಪೂರ್ವಕವಾಗಿ ಈ ಹೋರಾಟ ನಡೆಸಲಾಗುತ್ತಿದೆ. ನಮಗೂ ಕಾನೂನಿನ ಅರಿವಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

University sc/st ದೌರ್ಜನ್ಯ ದುರ್ಬಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ