ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ಸುಖ ನಿದ್ರೆ!

police and officers sleep at check posts: vehicles pass without checking

04-04-2018

ಚಿಕ್ಕಬಳ್ಳಾಪುರ: ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರನ್ನು ಮತ್ತು ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಿದ್ದು, ವಾಹನಗಳ ತಪಾಸಣೆ ಮಾಡಬೇಕಿದ್ದ ಪೊಲೀಸರು ನಿದ್ರೆಗೆ ಜಾರುತ್ತಿರುವುದು ಕಂಡುಬಂದಿದೆ. ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಗಡಿ ಭಾಗದಲ್ಲಿ ನಿಯೋಜನೆ ಮಾಡಿದ ಪೊಲೀಸ್ ಸಿಬ್ಬಂದಿ ಈ ರೀತಿ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದು, ಶಿಡ್ಲಘಟ್ಟ ಹೊರವಲಯದ ಲಕ್ಕಹಳ್ಳಿ ಗೇಟ್ ಮತ್ತು ಹಂಡಿಗನಾಳ ಚೆಕ್ ಪೋಸ್ಟ್ ಗಳಲ್ಲಿ ಮಧ್ಯರಾತ್ರಿ ಯಾವುದೇ ತಪಾಸಣೆ ಇಲ್ಲದೆ ವಾಹನಗಳು ಮುಕ್ತವಾಗಿ ಸಂಚಾರ ನಡೆಸುತ್ತಿವೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

check post checking ಅಧಿಕಾರಿ ತಪಾಸಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ