ಷಾ ಬಾಂಬ್: ರೆಡ್ಡಿ ಆಪ್ತರು ಪಕ್ಷೇತರರಾಗಿ ಸ್ಪರ್ಧೆ!04-04-2018

ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮೈಸೂರಿನಲ್ಲಿ ಹಾಕಿದ ಬಾಂಬ್ ಒಂದು ರಾಜ್ಯ ಬಿಜೆಪಿಯಲ್ಲಿ ಸಣ್ಣ ತಲ್ಲಣವನ್ನು ಉಂಟುಮಾಡಿದೆ. ಬಿಜೆಪಿಯಲ್ಲಿ ಯಾರೂ ನಿರೀಕ್ಷಿಸದ ಅಮಿತ್ ಷಾ ಅವರ ಈ ಹೇಳಿಕೆಯಂತೂ ಬಿಜೆಪಿಯಲ್ಲಿ ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಶ್ರೀರಾಮುಲು ಪಾಲಿಗಂತೂ ಬಿಸಿ ತುಪ್ಪವಾಗಿ ಪರಿಣಮಿಸಿದೆ.

‘ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ’ ಎನ್ನುವ ಅಮಿತ್ ಷಾ ಹೇಳಿಕೆ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ಮಿಂಚುವ ಪ್ರಯತ್ನ ನಡೆಸುತ್ತಿದ್ದ ಜನಾರ್ದನರೆಡ್ಡಿ ಅವರನ್ನು ತೀವ್ರ ಹತಾಶೆಗೆ ಅಷ್ಟೇ ತೀವ್ರ ಅಸಮಾಧಾನಕ್ಕೆ ದೂಡಿದೆ.

ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರವಹಿಸುವ ಜೊತೆಗೆ ಬಳ್ಳಾರಿ, ದಾವಣಗೆರೆ ಹಾಗೂ ಗದಗ ಜಿಲ್ಲೆಗಳ ರಾಜಕಾರಣವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಜನಾರ್ದನ ರೆಡ್ಡಿ ಹಾಗೂ ಅವರ ಪರಮಾಪ್ತ ಗೆಳೆಯ ಶ್ರೀರಾಮುಲು ಉದ್ದೇಶ ಆಗಿತ್ತು. ಆದರೆ, ಈ ಲೆಕ್ಕಾಚಾರಗಳೆಲ್ಲಾ ಅಮಿತ್ ಷಾ ಕೊಟ್ಟ ಆ ಒಂದು ಹೇಳಿಕೆ ಚಿಂದಿ ಮಾಡಿಬಿಟ್ಟಿತು.

ಅಮಿತ್ ಷಾ ಹೇಳಿಕೆ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದ ತಂತ್ರ ಇದೆ ಎಂದು ಭಾವಿಸಿರುವ ಜನಾರ್ದನ ರೆಡ್ಡಿ, ಈಗ ಸಂಧಾನಕ್ಕಾಗಿ ಶ್ರೀರಾಮುಲು ಅವರ ಮೊರೆ ಹೋಗಿದ್ದಾರೆ. ಶ್ರೀರಾಮುಲು, ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಲಿದ್ದು ಮಾತುಕತೆ ಯಶಸ್ವಿಯಾಗದಿದ್ದರೆ ಜನಾರ್ದನ ರೆಡ್ಡಿ ತಮ್ಮ ಆಪ್ತರನ್ನು ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿಸುವರು ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

janardhan reddy amit shah ಶ್ರೀರಾಮುಲು ಲೆಕ್ಕಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ