ದಾಖಲೆ ರಹಿತ ಹಣ ಸಾಗಾಟ: 4ಲಕ್ಷ ಜಪ್ತಿ

04-04-2018
ಮಂಡ್ಯ: ಜಿಲ್ಲೆಯ ಮೈಸೂರು-ಬೆಂಗಳೂರು ಹೆದ್ದಾರಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ ಸುಮಾರು 4ಲಕ್ಷಕ್ಕೂ ಅಧಿಕ ಹಣ ಸಾಗಾಣೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿದ್ದವರು ಜಿಗಣಿ ಮೂಲದವರು ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಚೆಕ್ ಪೋಸ್ಟ್ ಬಳಿ ಕಾರು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಗದು ಮತ್ತು ಕಾರನ್ನು ಜಪ್ತಿ ಮಾಡಿರುವ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಂದು ಕಮೆಂಟನ್ನು ಹಾಕಿ