ಬೇಕರಿ ಮಾಲೀಕನ ಅಮಾನವೀಯ ವರ್ತನೆ

stove burst: boy injured at backery

03-04-2018

ಮಂಡ್ಯ: ಸ್ಟೌವ್ ಸಿಡಿದು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದರೂ, ಚಿಕಿತ್ಸೆ ಕೊಡಿಸದ ಬೇಕರಿ ಮಾಲೀಕ ಅಮಾನವೀಯ ವರ್ತನೆ ತೋರಿದ್ದಾನೆ. ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ಲಕ್ಷ್ಮೀ ಜನಾರ್ಧನ ಬೇಕರಿಯಲ್ಲಿ ನಡೆದಿದೆ. ಕುಂದೂರು ಗ್ರಾಮದ ಪ್ರದೀಪ್ (17) ಗಾಯಗೊಂಡ ಬಾಲಕ. ಸ್ಟೌವ್ ಸಿಡಿದು ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸದೆ ಬಾಲಕನ ಮನೆಗೆ ಬಿಟ್ಟು ಬಂದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ, ಒಂಟಿಯಾಗಿ ಮಲಗಿ ನರಳಾಡ್ತಿದ್ದ ಬಾಲಕನಿಗೆ ಸ್ಥಳೀಯರು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಕೊಡಿಸದೆ ಮನೆಗೆ ಬಿಟ್ಟು ಬಂದ ಬೇಕರಿ‌ ಮಾಲೀಕನ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೇಕರಿ ಮಾಲೀಕನ ವಿರುದ್ಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bakery stove ಬಾಲಕ ಗ್ರಾಮಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ