ವಿಶ್ವನಾಥ್ ಕೈಗೆ ಜೆಡಿಎಸ್ ತೆನೆ

Kannada News

15-05-2017

ಮೈಸೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್. ವಿಶ್ವನಾಥ್ ಬರುವ ಹದಿನೈದು ದಿನದೊಳಗೆ ಜೆಡಿಎಸ್ ಪಕ್ಷ ಸೇರ್ಪಡೆಯಾಗುವುದು ಖಚಿತ.
ವಿಶ್ವನಾಥ್ ರೊಂದಿಗೆ ಕಾಂಗ್ರೆಸ್ ನ ಆರೇಳು ಹಾಲಿ ಶಾಸಕರು ಕೂಡ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಹೀಗಾಗಿ ವಿಶ್ವನಾಥ್ ಅವರು ಕಾಲಾವಕಾಶ ಕೋರಿದ್ದಾರೆ.
ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೆ ಮೈಸೂರು ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸುತ್ತಾರೆ.
ಜೆಡಿಎಸ್ ಶಾಸಕ ಚಿಕ್ಕಮಾದು ಮೈಸೂರಿನಲ್ಲಿ ಹೇಳಿಕೆ.                  

ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆಯಾದರೆ ಜೆಡಿಎಸ್ ಮತ್ತಷ್ಟು ಬಲವರ್ಧನೆ ಆಗಲಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೆ ವಿರೋಧ ವ್ಯಕ್ತವಾಗಿಲ್ಲ.
ಕೇವಲ ಹುಣಸೂರು ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆ ಭಾಗದ ಕಾರ್ಯಕರ್ತರು ಕೆಲ ಬೇಡಿಕೆ ಮುಂದಿಟ್ಟಿದ್ದಾರೆ.
ಶಾಸಕ ಜಿ.ಟಿ ದೇವೇಗೌಡ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ಕೋರಿದ್ದಾರೆ.
ಜಿ.ಟಿ.ಡಿ ಕೂಡ ತಮ್ಮ ಪುತ್ರನನ್ನು ಹುಣಸೂರಿನಿಂದ ಕಣಕ್ಕಿಳಿಸುವ ಇಚ್ಚೆ ಹೊಂದಿದ್ದಾರೆ.
ಇತ್ತೀಚಿನ ಬೆಳವಣಿಗೆಯಿಂದ ಜಿ.ಟಿ.ಡಿ ಕೂಡ ಬೇಸರಗೊಂಡಿದ್ದಾರೆ.
ತಮ್ಮ ಪುತ್ರನಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೈ ತಪ್ಪಲಿದೆ ಎಂಬ ಕಾರಣದಿಂದ ಜಿ.ಟಿ.ಡಿ ಬೇಸರಗೊಂಡಿದ್ದಾರೆ.
ಆದರೂ ಮುಂಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದ ಶಾಸಕ ಚಿಕ್ಕಮಾದು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ