ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

Mobile theft in hotel: video captured in cctv

03-04-2018

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‍ನ ಬ್ರಾಹ್ಮಿನ್ಸ್ ಕಫೆಯಲ್ಲಿ ಗ್ರಾಹಕರ ಸೋಗಿನಲ್ಲಿ ಹೋಟೆಲ್‍ಗೆ ಬಂದ ಇಬ್ಬರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಭಾನುವಾರ ಹೋಟೆಲ್‍ಗೆ ತಿಂಡಿ ತಿನ್ನುವ ನೆಪದಲ್ಲಿ ಬಂದ ಕಳ್ಳರು ಗುರುದತ್ ಎಂಬುವರ ಬಳಿಯಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಬಿಲ್ ಪಡೆದ ನಂತರ ತಿಂಡಿ ಪಡೆದುಕೊಳ್ಳಲು ಗುಂಪಲ್ಲಿ ಬಂದ ಕಳ್ಳ ಗುರುದತ್ ಎಂಬುವರ ಜೇಬಿನಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.

ಮೊಬೈಲ್ ಕಳವಾಗಿರೋದು ಗೊತ್ತಾಗದೇ ಗುರುದತ್ ಮನೆಗೆ ಹೋಗಿ ಹೋಟೆಲ್‍ನಲ್ಲಿ ಮೊಬೈಲ್ ಬಿಟ್ಟಿದ್ದೇನೆ ಎಂದುಕೊಂಡು ವಾಪಸ್ ಬಂದು ನೋಡಿದ್ದಾರೆ. ಹೋಟೆಲ್ ನಲ್ಲಿ ಮೊಬೈಲ್ ಇಲ್ಲದಿದ್ದುದನ್ನು ನೋಡಿ ಅಲ್ಲಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದಾಗ ಮೊಬೈಲ್ ಕಳ್ಳತನವಾಗಿರುವುದು ಗೊತ್ತಾಗಿದೆ. ಆ ನಂತರ ತಮ್ಮ ನಂಬರ್‍ಗೆ ಕರೆ ಮಾಡಿದಾಗ ಫೋನ್ ರಿಸೀವ್ ಮಾಡಿದ ಕಳ್ಳರು ಮಹಾಲಕ್ಷ್ಮೀ ಲೇಔಟ್‍ನ ಪಾರ್ಕ್ ಗೆ ಕರೆದಿದ್ದಾರೆ.

ವಾಪಸ್ ಫೋನ್ ಸಿಗುತ್ತದೆ ಎಂದು ಅಲ್ಲಿಗೆ ಹೋಗಿ ಮತ್ತೆ ಫೋನ್ ಮಾಡಿದಾಗ ಕಳ್ಳರು ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mobile CCTV ಫೋನ್ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ