ಕ್ಷುಲ್ಲಕ ಕಾರಣಕ್ಕೆ ದೊಂಬಿ: ನಾಲ್ವರ ಬಂಧನ

Riot for trivial reason: 4 people arrested

03-04-2018

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಂಬಿ ನಡೆಸಿ ಜಗಳ ಮಾಡಿ ಕಾರು ಚಾಲಕನೊಬ್ಬನ  ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಾಲ್ವರನ್ನು ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಚೋಹಳ್ಳಿ ಕಾಲೋನಿಯ ಶ್ರೀಕಾಂತ್ ಅಲಿಯಾಸ್ ಅಮೃತ್ (26), ಅಗ್ರಹಾರ ದಾಸರಹಳ್ಳಿಯ ಪ್ರದೀಪ್ ದಾಸ್ ಅಲಿಯಾಸ್ ದೀಪು (21), ಗೊಲ್ಲರ ಹಳ್ಳಿಯ ವಿಜಯಕುಮಾರ್ ಅಲಿಯಾಸ್ ವಿಜಿ (23), ವಿಜಯನಗರದ ಎಂಸಿ ಲೇಔಟ್‍ನ ಕಿರಣ್ ಕುಮಾರ್ ಅಲಿಯಾಸ್ ಕಿರಣ (19) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.

ಆರೋಪಿಗಳು ಕಳೆದ ಮಾರ್ಚ್ 26ರಂದು ರಾತ್ರಿ ದಾಸರಹಳ್ಳಿಯ ಸ್ಕೇರ್ ಪ್ಲೇಟ್ ಹೋಟೆಲ್ ಬಳಿ ಕಾರು ಚಾಲಕ ಅಕ್ಬರ್ ಪಾಷ ಎಂಬುವರು ನಿಂತಿದ್ದಾಗ ಏಕಾಏಕಿ ಬಂದು ಗಲಾಟೆ ಮಾಡಿದ್ದರು. ಗಲಾಟೆಯಲ್ಲಿ ಅಕ್ಬರ್ ಪಾಷ ಅವರ ತೊಡೆ, ಬೆನ್ನು, ಎಡಗೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಸ್ಥಳೀಯರು ಅಕ್ಬರ್ ಪಾಷನನ್ನು ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ವಿಷಯ ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ravi channanavar police ಎಡಗೈ ಸ್ಥಳೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ