ಪತ್ನಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಕಿರುಕುಳ

A man Showing pornography pictures to his wife and tortured: complaint filed

03-04-2018

ಬೆಂಗಳೂರು: ವಿವಾಹವಾಗಿ ಮೂರು ತಿಂಗಳಾದರೂ ಗರ್ಭಿಣಿಯಾಗಿಲ್ಲ ಎನ್ನುವ ಕಾರಣಕ್ಕೆ ವೈದ್ಯ ಪತಿಯೊಬ್ಬ ಪತ್ನಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಿರುಕುಳ ನೀಡಿದ ವೈದ್ಯ ಪತಿ.ಮಂಜುನಾಥ್ ಮೂರು ತಿಂಗಳ ಹಿಂದೆ ಸ್ವಾತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ಮದುವೆ ಆಗಿದ್ದನು. ಆ ಮದುವೆಯಾಗಿ ಮೂರು ತಿಂಗಳು ಕಳೆದರೂ ಪತ್ನಿ ಗುಡ್ ನ್ಯೂಸ್ ನೀಡಿಲ್ಲ ಎಂದು ಅಶ್ಲೀಲ ಚಿತ್ರಗಳನ್ನು ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಎಂದು ಸ್ವಾತಿ ಆರೋಪಿಸಿದ್ದಾರೆ.

ಅಶ್ಲೀಲ ಚಿತ್ರಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಕ್ಕಳಾಗಲಿವೆ ಎಂದು ಹಿಂಸೆ ನೀಡಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸದೇ ಹೋದರೆ ನಿನ್ನ ಜೊತೆಗಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇಷ್ಟು ದಿನಗಳಾದರೂ ಮಕ್ಕಳಾಗದಕ್ಕೆ ಮಾವನ ಜೊತೆ ಮಲಗಬೇಕೆಂದು ಸಹ ಪತಿ ಮಂಜುನಾಥ್ ಬಲವಂತ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಮಂಜನಾಥ್ ಸೋದರ ರಂಗನಾಥ್ ಮತ್ತು ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಂದು ಸ್ವಾತಿ ದೂರಿನಲ್ಲಿ ದಾಖಲಿಸಿದ್ದಾರೆ.

ಮೆಜೆಸ್ಟಿಕ್ ನಲ್ಲಿರುವ ತನ್ನ ತಂದೆಯ ಮನೆಯನ್ನು ಮಾರಾಟ ಮಾಡಿ ಹಣ ತಂದುಕೊಡಬೇಕೆಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಮಾತ್ರ ಮೂರು ತಿಂಗಳವರೆಗೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಎಫ್‍ಐಆರ್ ದಾಖಲಿಸದಿದ್ದನ್ನು ಪ್ರಶ್ನೆ ಮಾಡಿದ ನನ್ನ ತಂದೆಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಆರೋಪ ಮಾಡಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

sexual torture wife ಅಶ್ಲೀಲ ಚಿತ್ರ ಕಿರುಕುಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ