ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಲೇವಡಿ!

HD kumaraswamy challenged cm siddaramaiah!

03-04-2018

ಬೆಂಗಳೂರು: ನಾನು ರಾಜಕೀಯ ಮಾಡಲು ದೇವೇಗೌಡರ ರಾಜಕೀಯ ಬಲಿ ಪಡೆದ ಆರೋಪ ನನ್ನ ಮೇಲಿದೆ. ನಾನು ಅದರಿಂದ ಹೊರ ಬರಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,  ಮೇ 18ರಂದು ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬದಂದು ನನ್ನ ಪಕ್ಷ ಅಧಿಕಾರ ಸ್ವೀಕಾರ ಮಾಡಲಿದೆ. ಇದು ಸತ್ಯ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 5 ದಿನದಿಂದ ಸಿಎಂ ಸಿದ್ದರಾಮಯ್ಯ ಹಳ್ಳಿ ಹಳ್ಳಿಗೆ ಹೋಗುವ ಮೂಲಕ ಮೈಸೂರು ಭಾಗದಲ್ಲಿ ಠಿಕಾಣಿ ಹೂಡಿದ್ದಾರೆ.  ನಾನು ಸರ್ಕಾರವನ್ನು ದುರುಪಯೋಗ ಮಾಡಿ ಚುನಾವಣೆ ನಡೆಸಲಿಲ್ಲ. ಇಂದು ಸರ್ಕಾರ ಸರ್ಕಾರದ ಹಣದಲ್ಲಿ ಜಾಹೀರಾತು ನೀಡಿ ಖರ್ಚು ಮಾಡುತ್ತಿದೆ ಎಂದು ಕುಮಾರ ಸ್ವಾಮಿ ಆರೋಪಿಸಿದರು.

ರಾಜ್ಯದ ಜನರೇ ಕಾಂಗ್ರೆಸ್ ಪಕ್ಷವನ್ನ ದೂಳಿಪಟ ಮಾಡ್ತಿವಿ ಅಂತ ಕಿರುಚುತ್ತಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು. ಕಳೆದ ಬಾರಿ ನಾನು ರಾಮನಗರದಲ್ಲಿ ನಾಮಪತ್ರ ಸಲ್ಲಿಸಿ ಬಂದಿದ್ದೆ ಉಳಿದಂತೆ ಎಲ್ಲವನ್ನ ಕಾರ್ಯಕರ್ತರೇ ಮಾಡಿ ಗೆಲಿಸಿದರು. ನಾನು ಗಳಿಸಿರುವುದು ಜನಸಾಮಾನ್ಯರ ಪ್ರೀತಿಯನ್ನ. ಹಾಗಾಗಿ ಈ ಬಾರಿಯೂ ಅರ್ಜಿ ಹಾಕುತ್ತೇನೆ ಅಷ್ಟೆ ಎಂದು ತಿಳಿಸಿದರು.ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ದೇವೇಗೌಡರ ಮಡಿಲಿಗೆ ಹಾಕುತ್ತೇನೆ.  ಅದು ನನ್ನ ಕರ್ತವ್ಯ ಕೂಡಾ ಎಂದು ಕುಮಾರಸ್ವಾಮಿ ತಿಳಿಸಿದರು.

ನಟ ಸುದೀಪ್ ಮತ್ತು ನನ್ನದು ಮೊದಲಿನಿಂದಲೂ ಅವಿನಾಭಾವ ಸಂಬಂಧ. ರಾಜಕೀಯದ ಬಗ್ಗೆಯೂ ನಾನು ಮಾತನಾಡಿದ್ದೇನೆ. ರಾಜ್ಯದ ಜನರ ಸಮಸ್ಯೆ ಸರಿಪಡಿಸಲು ನೀವು ಉತ್ತಮ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದೇನೆ. ಮುಂದಿನ ನಡೆ ಸುದೀಪ್ ಗೆ ಬಿಟ್ಚಿದ್ದು. ಅವರಿಗೆ ನನ್ನ ಮೇಲೆ ಸಾಕಷ್ಟು ನಂಬಿಕೆಯಿದೆ.

ಪಕ್ಷಕ್ಕೆ ಸೇರುವುದು, ನಮ್ಮ ಪಕ್ಷದ ಪ್ರಚಾರಕ್ಕೆ ಮಾತ್ರ ಸೀಮಿತವಾಗುವುದು ಅವರಿಗೆ ಬಿಟ್ಟ ವಿಚಾರ. ದೇವೇಗೌಡರು ಕೂಡಾ ಸುದೀಪ್ ರವರಿಗೆ ಸಲಹೆ ನೀಡಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುವ ಸಿದ್ದರಾಮಯ್ಯನವರು ಜೋತಿಷ್ಯ ಕಲ್ತಿದ್ದಾರಾ?ಎಂದು ಲೇವಡಿ ಮಾಡಿ, ಏನು ಸಾಧನೆ ಆ ಕ್ಷೇತ್ರದಲ್ಲಿ ಎಂದು ಮೊದಲು ಹೇಳಲಿ ಎಂದು ಸವಾಲು ಹಾಕಿದರು.

 


ಸಂಬಂಧಿತ ಟ್ಯಾಗ್ಗಳು

H.D.Kumaraswamy sudeep ಸಾಧನೆ ಜೋತಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ