ಅಸಭ್ಯ ವರ್ತನೆ: ಪ್ರಾಧ್ಯಾಪಕನ ವಿರುದ್ಧ ದೂರು

Vulgar Conduct: Complaint Against Assistant Professor

03-04-2018

ಬೆಂಗಳೂರು: ಸಹಾಯಕ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ ಘಟನೆ ನಗರದ  ಮಹಾರಾಣಿ ಕಾಲೇಜಿನಲ್ಲಿ ನಡೆದಿದೆ. ಮಹಾರಾಣಿ ಕಾಲೇಜಿನ ಜೀವಾಣು ಶಾಸ್ತ್ರದ ಪ್ರಾಧ್ಯಾಪಕನಾಗಿರುವ ವಿಶ್ವನಾಥ್ ಕಾಲೇಜ್ ಕ್ಯಾಂಟೀನ್ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು ಈತನಿಗೆ ಕಾಲೇಜು ಆಡಳಿತ ಮಂಡಳಿ ನೋಟೀಸ್ ಕೂಡಾ ಜಾರಿ ಮಾಡಿದೆ. ಅಷ್ಟೇ ಅಲ್ಲ ಮಹಿಳಾ ಆಯೋಗಕ್ಕೂ ದೂರು ನೀಡಿದೆ.

ಹಲವು ವರ್ಷಗಳಿಂದ ಕಾಲೇಜಿನಲ್ಲಿ ಕೆಲಸ ಮಾಡಿಕೊಂಡಿರುವ ವಿಶ್ವನಾಥ್ ವಿದ್ಯಾರ್ಥಿನಿಗಳ ಜೊತೆ ಚೆಲ್ಲಾಟ ಆಡುತ್ತಾನೆ. ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸ್ತಾನೆ. ಅಷ್ಟೇ ಅಲ್ಲದೇ ಕೊಠಡಿಯ ಬೀಗದ ಕೈ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ರಜಾ ದಿನಗಳಲ್ಲಿ ಕಾಲೇಜಿಗೆ ಬಂದು ಕೆಲ ವಿದ್ಯಾರ್ಥಿನಿಯರ ಜೊತೆ ಕಾಲ ಕಳೆಯುತ್ತಾನೆ ಎಂದು ದೂರಲಾಗಿದೆ.


ಸಂಬಂಧಿತ ಟ್ಯಾಗ್ಗಳು

sexual harassment campus ಸಹಾಯಕ ಅಸಭ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ