ಎಂಎಲ್ಸಿ ಎಂದೇಳಿಕೊಂಡು ವಂಚಿಸುತ್ತಿದ್ದವನ ಬಂಧನ

police arrested a man who cheated in the name of MLC

03-04-2018

ಬೆಂಗಳೂರು: ವಿಧಾನ ಪರಿಷತ್ ಸದಸ್ಯನೆಂದು ಹೇಳಿಕೊಂಡು ಸರ್ಕಾರಿ ಕೆಲಸ, ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿಯೊಬ್ಬನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಸಹಕಾರ ನಗರದ ಎಲ್.ಸೋಮಣ್ಣ (39) ಬಂಧಿತ ಆರೋಪಿಯಾಗಿದ್ದು ನಗರದ ಹಲವೆಡೆ ಅಲ್ಲದೇ ಮೈಸೂರಿನಲ್ಲಿ ನಡೆದಿದ್ದ ಕೋಟ್ಯಾಂತರ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ಮೂಲದ ಆರೋಪಿಯು ತಾನು ಎಂಎಲ್‍ಸಿ ಸೋಮಣ್ಣ ಎಂದು ಪರಿಚಯ ಮಾಡಿಕೊಂಡು ವಂಚನೆ ನಡೆಸುತ್ತಿದ್ದ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ. ಆರೋಪಿಯು ತಾನು ಮೊಣಕಾಲ್ಮೂರು, ಚೆಲ್ಲಕೆರೆ, ಮೈಸೂರು ಭಾಗದ ವಿವಿಧ ಕ್ಷೇತ್ರಗಳ ಎಂಎಲ್‍ಎ ಅಭ್ಯರ್ಥಿ ಎಂದು ಹೇಳಿಕೊಂಡು ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದು ಅದಕ್ಕೆ ಚಿನ್ನದ ತಾಳಿ, ಬಿಸ್ಕೆಟ್‍ಗಳ ಅವಶ್ಯಕತೆ ಇದೆ ಎಂದು ಚಿನ್ನಾಭರಣ ವ್ಯಾಪಾರಿಗಳಿಗೆ ಆರ್ಡರ್ ಮಾಡಿ ವಂಚಿಸುತ್ತಿದ್ದ.

ಇದಲ್ಲದೆ ಸಾರ್ವಜನಿಕರಿಗೆ ಸರ್ಕಾರಿ ಕೆಲಸ, ನಿವೇಶನ, ಬ್ಯಾಂಕ್‍ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿ ಗಟ್ಟಲೆ ಮೋಸ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಯ ವಿರುದ್ಧ ವೈಯಾಲಿಕಾವಲ್, ಕೊಡುಗೆಹಳ್ಳಿ, ಮೈಸೂರಿನ ನಜರ್‍ಬಾದ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ ವಂಚನೆಗೊಳಗಾಗಿರುವವರು ಬಸವೇಶ್ವರ ನಗರ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ