ಕೂಲಿ ಹಣ ಬಿಡುಗಡೆ: ಕೈದಿಗಳಿಗೆ ಸಂತಸ

after one and half year government has released daily wages amount for Prisoner

03-04-2018

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಬರೋಬರಿ ಒಂದೂವರೆ ವರ್ಷಗಳ ನಂತರ ರಾಜ್ಯಸರ್ಕಾರ ಕೂಲಿ ಹಣವನ್ನು ಬಿಡುಗಡೆ ಮಾಡಿದೆ. ಕೂಲಿ ಹಣ ಬಿಡುಗಡೆ ಮಾಡಿರುವುದನ್ನು ಕೇಳಿ ಕಾರಾಗೃಹದಲ್ಲಿನ ಕೈದಿಗಳು ಸಂತಸಗೊಂಡಿದ್ದಾರೆ.

ವಿಚಾರಣಾಧೀನಾ ಕೈದಿಗಳು ಸೇರಿದಂತೆ ಕೆಲವರ ಅಪರಾಧಿಗಳು 2016 ಸೆಪ್ಟೆಂಬರ್ ನಿಂದ 2018 ಜನವರಿವರೆಗೂ ಮಾಡಿದ ಕೆಲಸದ ಹಣ ಇನ್ನೂ ಬಿಡುಗಡೆಯಾಗಿರಲಿಲ್ಲ. ತಾವೂ ಮಾಡಿದ್ದ ಕೆಲಸದ ಹಣವನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯೂ ಕೈದಿಗಳಿಂದ ಹೆಚ್ಚಾಗಿತ್ತು.

ಈ ಸಂಬಂಧ ಕೇಂದ್ರ ಕಾರಾಗೃಹದಲ್ಲಿನ ಮುಖ್ಯ ಸೂಪರಿಂಟೆಂಡ್ ಇಲಾಖಾ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಪತ್ರ ಬರೆದು ಅನುಮೋದನೆ ಪಡೆದುಕೊಂಡಿದ್ದರು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಹಣ ಬಿಡುಗಡೆಯಾಗಿರಲಿಲ್ಲ. ಈಗ ರಾಜ್ಯ ನೌಕರರ ಪರೋಪಕಾರಿ ನಿಧಿಯಿಂದ  ಹಣ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ.

ಖೈದಿಗಳ ಸ್ವಾಭಾವಿಕ ಕೆಲಸದ ಆಧಾರದ ಮೇಲೆ ಪ್ರತಿದಿನ 30, 40, 50 ರೂ ಕೂಲಿ ನೀಡಲಾಗುತ್ತದೆ. ಕೈದಿಗಳ ವೈಯಕ್ತಿಕ ಹಣದ ಖಾತೆಗೆ ಈ ಹಣವನ್ನು ಜಮೆ ಮಾಡಲಾಗುತ್ತದೆ. ಎಲ್ಲಾ ಕೈದಿಗಳೂ ಪಿಪಿಸಿ ಖಾತೆ ಹೊಂದಿದ್ದು, ಈ ಖಾತೆ ಮೂಲಕ ಹಣವನ್ನು ಜಮೆ ಮಾಡಲಾಗುತ್ತದೆ. ಆದರೆ ಇದು ವರ್ಷಾನುಗಟ್ಟಲೇ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

central jail parappana agrahara▶ ಅನುಮೋದನೆ ನಿಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ