‘ಬಿಜೆಪಿಯವರು ಸುಳ್ಳಿನ ಸರದಾರರು’-ಕುಲಕರ್ಣಿ

We win in election and show our strength-vinay kulkarni

03-04-2018

ಹುಬ್ಬಳ್ಳಿ: ಲಿಂಗಾಯತರಿಗೆ ನಲ್ವತ್ತು ಕ್ಷೇತ್ರಗಳಲ್ಲಿ ಟಿಕೆಟ್ ಕೊಡಲು ಕಾಂಗ್ರೆಸ್ ಹೈಕಮಾಂಡ್‌ಗೆ ಕೇಳುತ್ತೇವೆ ಎಂದು, ಹುಬ್ಬಳ್ಳಿಯಲ್ಲಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಬಿಜೆಪಿಯವರು ಸುಳ್ಳಿನ ಸರದಾರರು ಎಂದು ಕಿಡಿಕಾರಿದ ಅವರು, ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಯಾರೂ ಧೈರ್ಯ ಮಾಡಿರಲಿಲ್ಲ. ಸಿದ್ದರಾಮಯ್ಯ ಧೈರ್ಯಮಾಡಿ ಕೇಂದ್ರಕ್ಕೆ ಶಿಫಾರಸು ಕಳಿಸಿದ್ದಾರೆ ಎಂದರು.

ಲಿಂಗಾಯತ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ, ಚುನಾವಣೆಯಲ್ಲಿ ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ. ಮಾದಿಗ ಸಮಾಜ ಸೇರಿದಂತೆ ದಲಿತ ಸಮುದಾಯಗಳು ಹನ್ನೆರಡನೆಯ ಶತಮಾನದಿಂದ ಲಿಂಗಾಯತರ ಜೊತೆಗಿವೆ. ಸಿಎಂ ಕೊಟ್ಟ ಯೋಜನೆಗಳ ಆಧಾರದ ಮೇಲೆ ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಬಿಜೆಪಿಯವರು ತಮ್ಮದೆಂದು ಹೇಳಿಕೊಳ್ಳುತ್ತಾರೆ ಎಂದು ದೂರಿದರು.


ಸಂಬಂಧಿತ ಟ್ಯಾಗ್ಗಳು

Vinay Kulkarni lingayat ಸಿದ್ದರಾಮಯ್ಯ ಕೇಂದ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ